ತಮಿಳುನಾಡು –
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರ ರನ್ನು ಸೆಳೆಯಲು ಏನೆಲ್ಲಾ ಕಸರತ್ತು ಹರಸಾಹಸ ಮಾಡತಾರೆ .ಪಕ್ಷದವರು ಅಭ್ಯರ್ಥಿಗಳು ನಾವು ಅಧಿಕಾರಕ್ಕೆ ಬಂದರೆ ಅದನ್ನು ಮಾಡ್ತೀವಿ, ಇದನ್ನು ಮಾಡ್ತೀವಿ ಅಂತ ಭರಪೂರ ಭರವಸೆಗಳನ್ನ ನೀಡೋದನ್ನ ನೋಡಿದ್ದೀವಿ ಕೇಳಿದ್ದೇವೆ.ಆದರೆ ಇಲ್ಲೊಬ್ಬ ಅಭ್ಯರ್ಥಿ ಕೊಟ್ಟಿರೋ ಭರವಸೆಗಳನ್ನ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ನಿಜಕ್ಕೂ ಇವನು ಇದನ್ನೆಲ್ಲಾ ಕೊಡ್ತಾನಾ ಅಥವಾ ಬೊಗಳೆ ಬಿಡ್ತಿದ್ದಾನಾ ಅನಿಸುತ್ತೆ. ಹೌದು ಪ್ರತಿಯೊಂದು ಮನೆಗೂ ಮಿನಿ ಹೆಲಿಕಾಪ್ಟರ್, ಪ್ರತಿ ಮನೆಗೆ ವಾರ್ಷಿಕ 1 ಕೋಟಿ ಡೆಪಾಸಿಟ್, ಮದುವೆಗೆ ಚಿನ್ನಾಭರಣ, ಮೂರು ಅಂತಸ್ತಿನ ಮನೆ, ಮನೆ ಕೆಲಸವನ್ನ ಈಜಿ ಮಾಡೋಕೆ ರೋಬೋಟ್, ಎಲ್ಲರ ಮನೆಗೂ ಒಂದೊಂದು ಬೋಟ್, ತನ್ನ ಕ್ಷೇತ್ರವನ್ನ ಕೂಲ್ ಆಗಿ ಇಡೋಕೆ 300 ಅಡಿ ಎತ್ತರದ ಕೃತಕ ಮಂಜುಗಡ್ಡೆ ಪರ್ವತ, ಕ್ಷೇತ್ರದಲ್ಲಿ ಒಂದು ಸ್ಪೇಸ್ ರಿಸರ್ಚ್ ಸೆಂಟರ್, ರಾಕೆಟ್ ಲಾಂಚ್ ಪ್ಯಾಡ್.. ಇಷ್ಟೇ ಅಲ್ಲ ಚಂದ್ರನ ಅಂಗಳಕ್ಕೆ ಟೂರ್ ಬೇರೆ. ಹಾಗಿದ್ರೆ ಈತನ ಬಳಿ ಭಾರಿ ದುಡ್ಡು ಇರಬಹುದು ಅಲ್ಲಾ ಅಂತಾ ಅನಿಸಬಹುದು. ಆದ್ರೆ ಈತ ಚುನಾವಣೆಗೆ ನಿಲ್ಲೋಕೆ 20 ಸಾವಿರ ಸಾಲ ಮಾಡಿದ್ದಾನೆ ಅಂದ್ಹಾಗೆ ಈತನ ಹೆಸರು ಸರವಣನ್. ತಮಿಳುನಾಡಿನ ಮದುರೈ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾನೆ.
ಈತನ ಎಲೆಕ್ಷನ್ ಸಿಂಬಲ್ ‘ಕಸದ ಬುಟ್ಟಿ’ ಇದರ ಉದ್ದೇಶ ಏನು ಅಂದ್ರೆ, ಈಡೇರಿಸೋಕೆ ಆಗದೇ ಇರುವಂತಹ ಭರವಸೆಗಳನ್ನು ಕೊಡುವ ಅಭ್ಯರ್ಥಿ ಗಳಿಗೆ ಹಾಕುವ ಮತಗಳು ಕಸದ ಬುಟ್ಟಿಗೆ ಸಮ ಅಂತೆ ಏನೇ ಆಗಲಿ ಹತ್ತಾರು ಭರ್ಜರಿ ಭರವಸೆ ಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿದ್ದು ಮೆಚ್ಚುಗೆ ವಿಚಾರ ಆದರೆ ಮತಕ್ಕಾಗಿ ಆಕಾಶದಲ್ಲಿ ಚುಕ್ಕಿ ತೊರಿಸಿದ್ದು ತಪ್ಪು