ಅಥಣಿ –
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಅಥಣಿ ಯಲ್ಲಿ ನಡೆದಿದೆ.ಹೌದು ಪಟ್ಟಣದ ಸಾಯಿ ಮಂದಿರ ಹತ್ತಿರ ಈ ಒಂದು ಘಟನೆ ಸಂಭವಿಸಿದ್ದು ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಿಕ್ಷಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ
ಸಾತಪ್ಪ ಪಿ. ಪಿರಗೊಂಡ (55) ಮೃತರಾದವರಾಗಿದ್ದು ಸ್ವಗ್ರಾಮ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿಂಗನಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.ಮೃತ ಶಿಕ್ಷಕನ ನಿಧನಕ್ಕೆ ಶಿಕ್ಷಕರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಅಥಣಿ…..