This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

AAP ಯ ಐ ಲವ್ ಹು-ಧಾ ಬೃಹತ್ ಪಾದಯಾತ್ರೆಗೆ ಚಾಲನೆ

WhatsApp Group Join Now
Telegram Group Join Now

ಹುಬ್ಬಳ್ಳಿ –

ನಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿ, ವಿಶ್ವದರ್ಜೆಯ ಹು-ಧಾ ಕಟ್ಟುವ ಸಂಕಲ್ಪ ಮಾಡುವ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಲು ಆಮ್ ಆದ್ಮಿ ಪಕ್ಷದ ವತಿಯಿಂದ ಹುಬ್ಬಳ್ಳಿಯಲ್ಲಿ ಐ ಲವ್ ಹುಬ್ಬಳ್ಳಿ-ಧಾರವಾಡ ಬೃಹತ್ ಪಾದಯಾತ್ರೆ ಹುಬ್ಬಳ್ಳಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಲಾಯಿತು.

ಗುರುನಾನಕ್ ಟ್ರಸ್ಟ್ ನ ಮುಖ್ಯಸ್ಥರಾದ ಜ್ಞಾನಿ ಮೇಜರ್ ಸಿಂಗ್ ಮಾತನಾಡಿ, ಯಾವುದೇ ಒಂದು ಕೆಲಸ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮಾಡಬೇಕೆಂದರೆ ಅದು ಕೇವಲ ಪ್ರೀತಿಯಿಂದ. ಆದರೆ ಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ವಿಭಜನೆಯಂತಹ ಪರಿಸ್ಥಿತಿ ಕಂಡುಬರುತ್ತಿವೆ. ಅದನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಈ ಹಿನ್ನೆಲೆ ನಾವು ಕೂಡಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದರು. ಅದೇ ರೀತಿಯಾಗಿ ಮೌಲಾನಾ ಸೈಯದ್ ನಿಸಾರ್ ಅಹಮ್ಮದ್ ಛಗನ, ನವೋದ್ಯಮಿ ಉದ್ಯಮದ ಸಂಸ್ಥಾಪಕರಾದ ಡಾ.ನಿಲಂ ಮಹೇಶ್ವರಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ, ಪ್ರೀತಿ ಎಂಬುದು ಕೇವಲ ವ್ಯಕ್ತಿಗಳ ಮಧ್ಯೆ ಸೀಮಿತವಲ್ಲ. ಹಾಗಾಗಿ ನಮ್ಮ ದೇಶದ ಮಹಾನ್ ವ್ಯಕ್ತಿಗಳ ತಿಳಿಸಿರುವಂತೆ ಇಂದು ನಾವು ಜಾತಿ, ಮತ, ಕುಲ, ಭೇದ ಮರೆತು ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಎಲ್ಲೆಡೆ ಸಾರಬೇಕಾಗಿದೆ. ಈ ಮಹತ್ತರ ಕಾರ್ಯಕ್ಕೆ ಆಮ್ ಆದ್ಮಿ ಪಕ್ಷ ಮುಂದಾಗಿದ್ದು ಇದಕ್ಕೆ ಅವಳಿನಗರದ ಎಲ್ಲ ಜನತೆ ಕೈಜೋಡಿಸಬೇಕೆಂದರು.

ನಮ್ಮ ರಾಷ್ಟ್ರ ಇಂದು ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಬಂದು ನಿಂತಿದೆ. ಈ ವೇಳೆ ದೇಶದ ಮತ್ತು ರಾಜ್ಯದ ಬುದ್ದಿವಂತ ನಾಗರೀಕರು ಸಾಂಪ್ರದಾಯಿಕ ಪಕ್ಷಗಳ ದ್ವೇಷ, ವಿಭಜನೆಯ ರಾಜಕೀಯ ಹಾಗೂ ಆಮ್ ಆದ್ಮಿ ಪಕ್ಷದ ಪ್ರೀತಿ ಮತ್ತು ಬಂಧುತ್ವದ ಕಾಯಕದ ರಾಜಕೀಯದ ನಡುವೆ ಆರಿಸಬೇಕಾಗಿದೆ. ಎಲ್ಲರೂ ಒಗ್ಗೂಡಿ ಹು-ಧಾ ಕಟ್ಟುವ ಅವಶ್ಯಕತೆ ಇದೆ. ನಮ್ಮ ಹು-ಧಾ ಮಹಾನಗರವನ್ನು ದೆಹಲಿ ಮಾದರಿಯಲ್ಲಿ ಕಟ್ಟಿ ಅತ್ಯುತ್ತಮ ನಗರಗಳ ಸಾಲಿನಲ್ಲಿ ನಿಲ್ಲಿಸಲು ನಾವೆಲ್ಲರೂ ಇಂದು ಸಂಕಲ್ಪ ಮಾಡಬೇಕೆಂದರು.

ವ್ಯಾಲೆಂಟೈನ್ ಡೇ ಪ್ರೀತಿಯ ದಿನವಾದ ಇಂದು ನಗರದ ನಾಗರಿಕರಲ್ಲಿ ಪ್ರೀತಿ ಸಹಬಾಳ್ವೆಯ ಸಂದೇಶದ ಜೊತೆಗೆ ಹು-ಧಾ ಮಹಾನಗರವನ್ನು ದೇಶದ ಮತ್ತು ಜಗತ್ತಿನ ಅತ್ಯುನ್ನತ ನಗರಗಳ ಸಾಲಿನಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸುವ ಸಂಕಲ್ಪವನ್ನು ಮಾಡಲು ಇಂದು ಆರಂಭವಾಗಿರುವ ಐ ಲವ್ ಹು-ಧಾ ಬೃಹತ್ ಪಾದಯಾತ್ರೆ ಮೂಲಕ
ಮನೆ, ಮನೆಗೆ ತಲುಪುವ ಅಭಿಯಾನವನ್ನು ಧಾರವಾಡ ಜಿಲ್ಲಾ ಸಮಿತಿಯಿಂದ ನಡೆಸಲಾಯಿತು.

ಪಾದಯಾತ್ರೆ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಪಕ್ಷದ ಮುಖಂಡರಾದ ಲಕ್ಷ್ಮಣ ರಾಥೋಡ, ವಿಜಯ ಸಾಯಿ, ತ್ಯಾಗರಾಜ, ಅಬ್ದುಲ್ ರಹುಫ್, ಶಿವಕುಮಾರ್ ಬಾಗಲಕೋಟೆ, ಮೆಹಬೂಬ್ ಹರವಿ, ಅಶ್ವೀನ ಕುಬಸದಗೌಡರ, ಮಂಜುನಾಥ ಸುಳ್ಳದ, ಲಕ್ಷ್ಮಣ ನರಸಾಪುರ, ಉದಯ ಫೆಂಡ್ಸೆ, ಶರೀಫ್ ಸಾಬ ಮಡೀಕೇಶ್ವರ, ನವೀನಸಿಂಗ್ ರಜಪೂತ,‌ ಲತಾ ಅಂಗಡಿ, ರೂಪಾಯಿ ನರಗುಂದ, ಸುನಂದ ಕರಡಿಗುಡ್ಡ, ವಿದ್ಯಾ ನಾಡಿಗೇರ್, ವಿಜಯಲಕ್ಷ್ಮಿ ಹೊಳ್ಳೆನ್ನವರ, ಪ್ರಶಾಂತ ಹುಲಗೇರಿ, ರೇವಣ್ಣಸಿದ್ದಪ್ಪ ಹುಬ್ಬಳ್ಳಿ, ಜಡೇನವರ,ಎಸ್.ಎಫ್.ಪಾಟೀಲ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು


Google News

 

 

WhatsApp Group Join Now
Telegram Group Join Now
Suddi Sante Desk