ಹುಬ್ಬಳ್ಳಿ –
ಟಿಪ್ಪರ್ ಹಿಂದಿನ ಚಕ್ರದಲ್ಲಿ ಸಿಲುಕುವಷ್ಟರಲ್ಲಿ ಬೈಕ್ ಸವಾರನೊಬ್ಬ ಬದುಕಿ ಪಾರಾಗಿ ಬಂದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗೊಕುಲ್ ರಸ್ತೆಯ ಬಸವೇಶ್ವರ ನಗರದ ನಿವಾಸಿಯಾದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ರಾಕೇಶ್ ಕುಲಕರ್ಣಿ (೨೮) ಪಾರಾಗಿ ಬಂದವರಾಗಿದ್ದಾರೆ. ಟಿಪ್ಪರ್ ಟ್ರಕ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ನರೇಶ ನಾಯಕ್ ಎಂಬ ಮಾಲಿಕತ್ವದ ಖಡಿ ತುಂಬಿದ್ದ ಲಾರಿ ಕಲಘಟಗಿ ತಾಲ್ಲೂಕಿ ಎಮ್ಮೆಟ್ಟಿ ಕಲ್ಲಿನ ಗಣಿಯಿಂದ ಖಡಿ ತುಂಬಿಕೊಂಡು ಹುಬ್ಬಳ್ಳಿಯ ಬೈಪಾಸ್ ನಿಂದ ಗೋಕುಲ ರಸ್ತೆಯ ಮಾರ್ಗವಾಗಿ ಮಾರಡಗಿ ಗ್ರಾಮದತ್ತ ಹೊರಟಿತ್ತು. ವೇಗದಲ್ಲಿ ಸಂಚರಿಸುತ್ತಿತ್ತು ಆದ್ರೆ ಅದೆ ಮಾರ್ಗದಿಂದ ರಾಕೇಶ ಕುಲಕರ್ಣಿ ಸ್ಕೂಟರ್ ಮೇಲೆ ವಿದ್ಯಾನಗರದತ್ತ ಹೊರಟಿತ್ತು.ಆದ್ರೆ ತಿರುವಿನಲ್ಲಿ ಸ್ಕೂಟರ್ ಗಮನಿಸದ ಲಾರಿ ಚಾಲಕ ಮುಂದೆ ಕಂಡ ತಿರುವಿನಲ್ಲಿ ಹಠಾತ್ತಾಗಿ ತಿರುವಿದ್ದರಿಂದ ಲಾರಿಯ ಹಿಂಬದಿ ಚಕ್ರಕ್ಕೇ ದ್ವಿಚಕ್ರ ವಾಹನ ಸವಾರ ಸಿಲುಕಿಕೊಂಡಿದ್ದಾನೆ.
ಕೂಡಲೆ ಇದನ್ನು ನೋಡಿದ ಸಾರ್ವಜನಿಕರು ಕಿರುಚಾಡಿದ್ದಾರೆ.ಇದರಿಂದ ಎಚ್ಚೆತ್ತ ಲಾರಿ ಚಾಲಕ ಬ್ರೇಕ್ ಹಿಡಿದಿದ್ದರಿಂದ ಲಾರಿ ನಿಂತಿತು ಇತ್ತ ಬೈಕ್ ಸವಾರನ ಜೀವವೂ ಉಳಿಯಿತು ಒಟ್ಟಾರೆ ಸ್ವಲ್ಪವೂ ಎಡವಟ್ಟಾಗಿದ್ದರು ಸಹ ನಡು ರಸ್ತೆಯಲ್ಲಿ ದೊಡ್ಡ ಅನಾಹುತವೊಂದು ನಡೆಯುತ್ತಿತ್ತು.
ಆದರೆ ಸಮಯ ಚನ್ನಾಗಿದೆ.ಇನ್ನೂ ಲಾರಿಗಳಿಗೆ ನಗರ ಪ್ರವೇಶಿಸುವ ಮೂಲಕ ಸಂಚರಿಸಲು ಅನುಮತಿ ನೀಡಿರುವ ಅಧಿಕಾರಿ ಯಾರು ಯಾತಕ್ಕಾಗಿ ನಗರದಲ್ಲಿ ಇವುಗಳು ಸಂಚರಿಸುತ್ತವೆ ಎಂಬುದನ್ನ ಸಂಚಾರಿ ಪೊಲೀಸರೇ ಉತ್ತರಿಸಬೇಕು