ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಮೂಲ ಸೌಲಭ್ಯಗಳ ಕುರಿತು ಹೈಕೋರ್ಟ್ ನಿನ್ನೇಯಷ್ಟೇ ರಾಜ್ಯ ಸರ್ಕಾರಕ್ಕೆ ಛಾಟಿ ಏಟು ಬೀಸಿತ್ತು ಈ ಒಂದು ಎಚ್ಚರಿಕೆಯಿಂದ ಎಚ್ಚೇತ್ತು ಕೊಂಡಿದ್ದಾರೆ ರಾಜ್ಯದ ಶಿಕ್ಷಣ ಸಚಿವರು ಹೌದು ನಿನ್ನೆಯಷ್ಟೇ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉತ್ಸವ ನಡೆಸುತ್ತೀರಿ.
ನಿಮಗೆ ಮಕ್ಕಳಿಗೆ ಸಮವಸ್ತ್ರ ನೀಡಲು ಆಗುದಿಲ್ವಾ ನಾಚಿಕೆಯಾಗಬೇಕು ನಿಮಗೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿತ್ತು.ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದ ಆರಂಭ ದಲ್ಲೇ ಒಂದು ಜೊತೆ ಸಮವಸ್ತ್ರ ವಿತರಿಸುವುದಾಗಿ ಹೇಳಿದೆ.
ಈ ಕುರಿತಂತೆ ಇಂದು ಟ್ವಿಟ್ ಮಾಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2022-23) ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಈಗಾಗಲೇ 2 ಜೊತೆ ಸಮವಸ್ತ್ರ ಮತ್ತು ಶೂ-ಸಾಕ್ಸ್ ವಿತರಿಸಲಾಗಿದೆ.ಮುಂದಿನ ಶೈಕ್ಷಣಿಕ ವರ್ಷದ (2023-24) ಆರಂಭದಲ್ಲೇ ಸಮವಸ್ತ್ರ ವಿತರಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ (1 ಜೊತೆ ಸಮವಸ್ತ್ರ) ಪೂರ್ಣಗೊಳಿಸಲಾಗಿದ್ದು, ಕಾರ್ಯಾದೇಶವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..