ಶಹಾಪುರ –
ಮಕ್ಕಳ ಶೈಕ್ಷಣಿಕ ಉನ್ನತಿಗೆ ಹಾಗೂ ಮಕ್ಕಳ ಗೈರು ಹಾಜರಿ ಯನ್ನು ತಡೆಗಟ್ಟುವ ಪ್ರಮುಖ ಪಾತ್ರ ನಿರ್ವಹಿಸುತ್ತಾ ಸೇವೆ ಸಲ್ಲಿಸುತ್ತಿರುವ ಬಿಸಿಯೂಟದ ಸಿಬ್ಬಂದಿಯನ್ನು 60 ವರ್ಷ ವಯೋಮಾನ ನೆಪವೊಡ್ಡಿ ಸೇವೆಯಿಂದ ಬಿಡುಗಡೆ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ಅಕ್ಷರ ದಾಸೋಹ ನೌಕರ ಸಂಘದ ನೌಕರರು ಅಕ್ಷರ ದಾಸೋಹದ ಅಧಿಕಾರಿ ಎ.ಬಿ.ಸೂರ್ಯವಂಶಿ ಅವರಿಗೆ ಮನವಿ ಸಲ್ಲಿಸಿದರು.2001ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿ ಮಾಡಲಾಗಿತ್ತು.ಆದರೆ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿಲ್ಲ. ಸಿಐಟಿಯು ಸಂಘಟನೆಯು 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದೆ ಇಂದಿಗೂ ಸ್ಪಂದಿಸಿಲ್ಲ. ಬಜೆಟ್ ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ₹1 ಸಾವಿರ ವೇತನವನ್ನು ಜನವರಿ 2022ರಿಂದ ಅನ್ವಯಿಸಿ ಜಾರಿ ಮಾಡಬೇಕು ಎಂದು ಪ್ರಾಂತ ಕೃಷಿಕೂಲಿಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್ ನದಾಫ್ ಆಗ್ರಹಿಸಿ ದರು.
ಸಂಘಟನೆಯ ಮುಖಂಡರಾದ ಬಸಲಿಂಗಮ್ಮ ನಾಟೇಕರ್ ಸುನಂದಾ ಹಿರೇಮಠ,ಹಣಮಂತಿ ಮೌರ್ಯ, ಮಂಜುಳಾ ಹೊಸ್ಮನಿ,ಲಾಲ್ಬಿ ಸೇರಿದಂತೆ ಹಲವರು ಈ ಒಂದು ಹೋರಾಟ ದಲ್ಲಿ ಪಾಲ್ಗೊಂಡಿದ್ದರು.