ಧಾರವಾಡ –
ಆಗಷ್ಟೇ ಶಾಲೆಯಲ್ಲಿ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ಮುಗಿಸಿಕೊಂಡು ಕುಳಿತಿದ್ದ ಶಿಕ್ಷಕರ ಮೇಲೆ ಹಲ್ಲೆ ಗೆ ಯತ್ನಿ ಸಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಭೂ ಕೊಪ್ಪ ದಲ್ಲಿ ನಡೆದಿದೆ.ಹೌದು ಶಾಲೆಗೆ ಏಕಾಏಕಿ ಯಾಗಿ ನುಗ್ಗಿದ ಕೆಲವರು ಶಾಲೆಯಲ್ಲಿ ಕುಳಿತಿದ್ದ ಶಿಕ್ಷಕರೊಂದಿಗೆ ಮಾತನಾಡುತ್ತಾ ಜಗಳ ತೆಗೆದಿದ್ದಾರೆ
2019 ರಲ್ಲಿ ಶಾಲೆಗೆ ಕೊಠಡಿ ಯೊಂದು ಬಿಡುಗಡೆ ಯಾಗಿತ್ತು ಇದೇ ವಿಚಾರಕ್ಕೆ ಈ ಹಿಂದೆ ಗಲಾಟೆ ಯಾಗಿತ್ತು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮದ ಕೆಲವರು ರಾಮನಗೌಡ ಪಾಟೀಲ್ ಮತ್ತು ಇನ್ನೂ ಕೆಲವರು ಪದೇ ಪದೇ ಶಾಲೆಯ ಶಿಕ್ಷಕ ಸುಲೇಮಾನ್ ಮುಲ್ಲಾ ಅವರೊಂದಿಗೆ ಜಗಳ ಮಾಡುತ್ತಿದ್ದರಂತೆ ಹೀಗಾಗಿ ಇಂದು ಮತ್ತೆ ಶಾಲೆಗೆ ನುಗ್ಗಿ ಮಾತಿನ ಚಕಮಕಿ ನಡೆಸಿ ಏಕಾಏಕಿ ಹಲ್ಲೆ ಗೆ ಮುಂದಾಗಿದ್ದಾರೆ ಈ ಒಂದು ದೃಶ್ಯ ಗಳು ಶಾಲೆಯ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ.
ಸಧ್ಯ ಹಳೆಯ ವಿಚಾರ ವನ್ನು ಮುಂದಿಟ್ಟುಕೊಂಡು ಶಾಲೆ ಗೆ ನುಗ್ಗಿ ಹೀಗೆ ದಾಂಧಲೆ ಮಾಡಿ ಶಿಕ್ಷಕರ ಮೇಲೆ ಹಲ್ಲೆ ಗೆ ಮುಂದಾಗಿದ್ದು ಎಷ್ಟು ಸರಿ ಸಧ್ಯ ಈ ಒಂದು ವಿಚಾರ ಕುರಿತು ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.