This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಸರ್ಕಾರಿ ಶಾಲಾ ಶಿಕ್ಷಕಿ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಯ ವರೆಗೆ ದೇಶದ ಪ್ರಥಮ ಪ್ರಜೆ ನಡೆದು ಬಂದ ದಾರಿ ಕುರಿತು ಒಂದು ಅವಲೋಕನ…..

WhatsApp Group Join Now
Telegram Group Join Now

ನವದೆಹಲಿ –

ದೇಶದ ನೂತನ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ ಹೌದು ಹಿಂದೊಮ್ಮೆ ಸರ್ಕಾರಿ ಶಾಲೆಯ ಸಾಮಾನ್ಯ ಶಿಕ್ಷಕಿಯಾಗಿದ್ದ ಇವರು ಇಂದು ಐತಿಹಾಸಿಕ,ವೈಭವೋಪೇತವಾದ ರಾಷ್ಟ್ರ ಪತಿ ಭವನವನ್ನು ಪ್ರವೇಶಿಸಲಿದ್ದಾರೆ.ಅಷ್ಟಕ್ಕೂ ದ್ರೌಪದಿ ಮುರ್ಮು ಜೀವನ ದಾರಿ ಹೇಗಿತ್ರು ರಾಷ್ಟ್ರಪತಿಯವರ ಜೀವನ ಹೇಗಿರುತ್ತದೆ ಅವರ ಭದ್ರತೆ ಹೇಗಿರುತ್ತದೆ ಅವರಿಗೆ ಇರುವ ಸೌಲಭ್ಯಗಳು ಯಾವುವು ಒಂದು ವಿಶೇಷ ಸ್ಟೋರಿ

ಶಿಕ್ಷಕಿಯಿಂದ ಮೇಡಂ ಪ್ರಸಿಡೆಂಟ್‌ವರೆಗೆ…
ಹೌದು ಒಡಿಶಾದ ಮಯೂರ್‌ಗಂಜ್‌ ಜಿಲ್ಲೆಯ ಉಪಾರ್‌ ಬೆಡ ಎಂಬ ಹಳ್ಳಿಯಲ್ಲಿ 1958ರ ಜೂ 20ರಂದು ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ಆದಿವಾಸಿಗಳ ಸಮುದಾಯದಲ್ಲಿ ಇವರು ಜನಿಸಿದರು.ಅವರ ತಂದೆ, ತಾತನವರು ಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು. ಬಾಲ್ಯದಲ್ಲಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಸರ್ಕಾರಿ ಶಾಲೆಯಲ್ಲಿ ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.ಅವರ ಮನೆಯವರು, ಬ್ಯಾಂಕ್‌ ನಲ್ಲಿ ಉದ್ಯೋಗಿಯಾಗಿದ್ದ ಶ್ಯಾಮ್‌ ಚರಣ್‌ ಮುರ್ಮು ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು.ಆದರೆ, 2014ರಲ್ಲಿ ಶ್ಯಾಮ್‌ ಅವರು ನಿಧನ ಹೊಂದಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದು ಗಂಡು ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ.

ಪ್ರಾಧ್ಯಾಪಕಿಯಾಗಿದ್ದ ಅವರು ಒಡಿಶಾದ ರಾಯ್‌ರಂಗಾ ಪುರದಲ್ಲಿರುವ ಶ್ರೀ ಅರಬಿಂದೋ ಇಂಟಿಗ್ರಲ್‌ಎಜುಕೇಶನ್‌ ಆಯಂಡ್‌ ರಿಸರ್ಚ್‌ ಇನ್ಸಿಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.ಆನಂತರ ಒಡಿಶಾ ಸರಕಾರ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಅಸಿಸ್ಟಂಟ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ರಾಜಕೀಯ ಜೀವನ
1997ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಮುರ್ಮು, ರಾಯ್‌ರಂಗಾನಗರ ಪಂಚಾಯಿತಿಗೆ ಕೌನ್ಸಿಲರ್‌ ಆಗಿ ಅದೇ ವರ್ಷ ಆಯ್ಕೆಯಾಗಿದ್ದರು.2000ನೇ ಇಸವಿಯಲ್ಲಿ ಅವರು ಅದೇ ಪಂಚಾಯಿತಿಯ ಅಧ್ಯಕ್ಷರಾಗಿದ್ದರು.ಅದೇ ವರ್ಷ, ಬಿಜೆಪಿಯ ರಾಷ್ಟ್ರೀಯ ಎಸ್‌ಟಿ ಮೋರ್ಚಾಕ್ಕೆ ಉಪಾಧ್ಯಕ್ಷ ರಾಗಿ ನೇಮಕಗೊಂಡರಲ್ಲದೆ ಆ ವರ್ಷ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್‌ರಂಗಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾ ದರು.ಆಗ ರಚನೆಯಾದ ಬಿಜೆಪಿ – ಬಿಜು ಜನತಾದಳ ಸಮ್ಮಿಶ್ರ ಸರಕಾರದಲ್ಲಿ ವಾಣಿಜ್ಯ ಇಲಾಖೆಯ ಸ್ವತಂತ್ರ ಸಚಿವೆಯಾಗಿ(2000-02)ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರಾಗಿ (2002 04)ಲ್ಲಿ ಸೇವೆ ಸಲ್ಲಿಸಿದ್ದರು.ಸಚಿವರಾಗಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾ ಸರಕಾರ ಶ್ರೇಷ್ಠ ಶಾಸಕರಿ ಗಾಗಿ ನೀಡಲಾಗುವ ನೀಲಕಂಠ ಪ್ರಶಸ್ತಿಯನ್ನು ಅವರಿಗೆ 2007ರಲ್ಲಿ ನೀಡಿ ಗೌರವಿಸಿತ್ತು.

ರಾಜ್ಯಪಾಲರಾಗಿ ಸೇವೆ
2015ರಲ್ಲಿ ಕೇಂದ್ರ ಸರಕಾರ ಅವರನ್ನು ಜಾರ್ಖಂಡ್‌ನ‌ ರಾಜ್ಯಪಾಲರಾಗಿ ನೇಮಿಸಿತ್ತು.ಈ ಮೂಲಕ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಮೊದಲ ಬಾರಿಗೆ ರಾಜ್ಯ ಪಾಲರ ಸ್ಥಾನ ಅಲಂಕರಿಸಿದ ಹೆಗ್ಗಳಿಕೆಗೆ ಮುರ್ಮು ಅವರು ಪಾತ್ರರಾಗಿದ್ದರು.

ರಾಷ್ಟ್ರಪತಿಯವರ ಭದ್ರತಾ ಸಿಬ್ಬಂದಿ
ಭೂಸೇನೆಯಲ್ಲಿ ಅತಿ ಹಿರಿಯ ಯೋಧರನ್ನೇ ರಾಷ್ಟ್ರಪತಿ ಗಳ ಭದ್ರತಾ ಪಡೆಯಲ್ಲಿ ನಿಯೋಜಿಸ ಲಾಗುತ್ತದೆ.ಇವರ ಪಡೆಗೆ ದ ಪ್ರಸಿಡೆಂಟ್ಸ್‌ ಬಾಡಿಗಾರ್ಡ್‌(ಪಿಬಿಜಿ) ಪಡೆ ಎಂದು ಹೇಳಲಾಗುತ್ತದೆ.ಈ ಪಡೆಯ ಒಂದು ಭಾಗವಾಗಿ ಅಶ್ವದಳ ವಿರುತ್ತದೆ.ಹಾಗಾಗಿ ಇಡೀ ವಿಶ್ವದಲ್ಲಿ ರಾಷ್ಟ್ರಪತಿಯವರಿಗೆ ಅಶ್ವದಳದ ಕಾವಲು ಇರುವುದು ಭಾರತದಲ್ಲಿ ಮಾತ್ರ ಎಂಬ ಹೆಗ್ಗಳಿಕೆ ಇದೆ. ಇನ್ನು ಶಾಂತಿಯ ವಾತಾವರಣವಿ ದ್ದಾಗ ರಾಷ್ಟ್ರಪತಿಗಳ ಸುರಕ್ಷತಾ ಪಡೆಯಾಗಿ ಕಾರ್ಯ ನಿರ್ವಹಿಸುವ ಪಿಬಿಜಿಯು ಯುದ್ಧಕಾಲದಲ್ಲಿ ಸೇನೆಯಲ್ಲಿ ಸೇರಿಕೊಂಡು ಯುದ್ಧದಲ್ಲೂ ಭಾಗವಹಿಸಬಲ್ಲುದು. ಈ ಪಡೆಗೆ ಪ್ಯಾರಾಟ್ರೂಪರ್‌ ತರಬೇತಿ ನೀಡಲಾಗಿರುತ್ತದಾ ದ್ದರಿಂದ ಇವರಿಗೆ ಯುದ್ಧದಲ್ಲಿ ಭಾಗವಹಿಸಲು ಅವಕಾಶ ವಿದೆ.

ನಿವೃತ್ತಿಯ ನಂತರ …
– ಸದ್ಯದ ಪ್ರಕಾರ, ತಿಂಗಳಿಗೆ 1.5 ಲಕ್ಷ ರೂ.ಪಿಂಚಣಿ
– ಮಾಜಿ ರಾಷ್ಟ್ರಪತಿಯವರ ಪತ್ನಿಗೆ ಮಾಸಿಕ 30 ಸಾವಿರ ಪಿಂಚಣಿ.
– ಪೀಠೊಪಕರಣಯುಕ್ತವಾದ, ಬಾಡಿಗೆ ರಹಿತ ಬಂಗಲೆ (8ನೇ ಮಾದರಿಯ ನಿವಾಸ).
– ಎರಡು ಲ್ಯಾಂಡ್‌ಲೈನ್‌ ಫೋನ್‌ ಕನೆಕ್ಷನ್‌ ಹಾಗೂ ಒಂದು ಮೊಬೈಲ್‌ ಕನೆಕ್ಷನ್‌.
– ಐವರು ಖಾಸಗಿ ಸಿಬ್ಬಂದಿ. ಇವರ ವಾರ್ಷಿಕ ವೆಚ್ಚ 60 ಸಾವಿರ ರೂ. ಸರಕಾರದಿಂದ ಪಾವತಿ.
– ಆಜೀವ ಪರ್ಯಂತ ರೈಲು ಮತ್ತು ವಿಮಾನ ಸೇವೆ.

ಗಟ್ಟಿಗಿತ್ತಿ ದ್ರೌಪದಿ ಮುರ್ಮು
ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿರುವ ದ್ರೌಪದಿ ಮುರ್ಮು ಅವರು ರಾಜಕೀಯವಾಗಿ ಒಂದೊಂದೇ ಮೆಟ್ಟಿಲು ಹತ್ತಿದರೂ ವೈಯಕ್ತಿಕವಾಗಿ ಮಾತ್ರ ಭಾರೀ ನೋವನ್ನೇ ಅನುಭವಿಸಿದ್ದಾರೆ.2009ರಿಂದ 2014ರ ವರೆಗೆ ಮುರ್ಮು ಅವರು ತಮ್ಮದೇ ಕುಟುಂಬದ ಒಟ್ಟು ಮೂವರ ನ್ನು ಕಳೆದುಕೊಂಡರು.ಇದು ಅವರನ್ನು ಅತ್ಯಂತ ನೋವಿಗೆ ದೂಡಿತ್ತು.2009ರ ಮೇನಲ್ಲಿ ನಡೆದ ಲೋಕಸಭೆ ಚುನಾ ವಣೆಯಲ್ಲಿ ಸೋಲು ಕಂಡ ಅವರು ಇದಾದ 5 ತಿಂಗಳಲ್ಲಿ ಪುತ್ರ ಲಕ್ಷ್ಮಣ್‌ ಅವರನ್ನು ಅನಿರೀಕ್ಷಿತವಾಗಿ ಕಳೆದುಕೊಂ ಡರು.ಆಗ ತೀರಾ ನೋವುಂಡವರಂತೆ ಕಂಡ ಅವರು, ಬ್ರಹ್ಮಕುಮಾರಿಯರ ಆಶ್ರಮಕ್ಕೆ ಸೇರಿದ್ದರು.2013ರಲ್ಲಿ ಅವರ ಎರಡನೇ ಪುತ್ರ ಕೂಡ ಅಪಘಾತಕ್ಕೀಡಾಗಿ ಸಾವಿ ಗೀಡಾದರು.ಆಗಲೂ ಬ್ರಹ್ಮಕುಮಾರಿಯರ ಆಶ್ರಮದಲ್ಲೇ ಇದ್ದ ಅವರು ಈ ವೇಳೆ ಧೈರ್ಯವಾಗಿಯೇ ನೋವನ್ನು ಎದುರಿಸಿದರು.ಇದಾದ ಒಂದು ವರ್ಷದಲ್ಲೇ ತಮ್ಮ ಪತಿ ಬ್ಯಾಂಕ್‌ ಉದ್ಯೋಗಿಯಾಗಿದ್ದ ಶ್ಯಾಮ್‌ ಅವರನ್ನೂ ಕಳೆದು ಕೊಂಡರು.ಸದ್ಯ ಇವರಿಗೆ ಇತಿಶ್ರೀ ಎಂಬ ಪುತ್ರಿ ಇದ್ದು ಇವರು ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ.

ಬಿಜೆಪಿಯ ಮಸೂದೆ ಮರಳಿಸಿದ್ದರು!
ಆರಂಭದಿಂದಲೂ ತಮ್ಮ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಶ್ರಮಿಸುತ್ತಿದ್ದ ಮುರ್ಮು ಅವರುತಮ್ಮ ಇಬ್ಬರು ಪುತ್ರರು ಮತ್ತು ಪತಿ ಸಾವನ್ನಪ್ಪಿದ ಮೇಲೆ ಇವರ ಹೆಸರಿ ನಲ್ಲಿಯೇ ಶ್ಯಾಮ್‌ ಅವರ ಗ್ರಾಮ ಪಹದ್‌ಪುರದಲ್ಲಿ ಶಾಲೆಯೊಂದನ್ನು ತೆರೆದಿದ್ದಾರೆ.ಸದ್ಯ ಇದರಲ್ಲಿ 60 ಮಕ್ಕಳು ಕಲಿಯುತ್ತಿದ್ದಾರೆ.ಹಾಗೆಯೇ 2015 ರಲ್ಲಿ ಕೇಂದ್ರ ಸರಕಾರ ಮುರ್ಮು ಅವರನ್ನು ಜಾರ್ಖಂಡ್‌ನ‌ ರಾಜ್ಯಪಾಲರನ್ನಾಗಿ ಮಾಡಿತು.ಇದನ್ನು ಬುಡಕಟ್ಟು ಸಮುದಾಯಗಳು ಸ್ವಾಗತಿ ಸಿದವು.ಅಷ್ಟೇ ಅಲ್ಲ ಇವರ ಅವಧಿಯಲ್ಲಿ ಜಾರ್ಖಂಡ್‌ ರಾಜ ಭವನ ಜನಸಾಮಾನ್ಯರಿಗೆ ಎಂದಿಗೂ ತೆರೆದಿತ್ತು. ಅಲ್ಲದೆ ಅಲ್ಲಿನ ಬಿಜೆಪಿ ಸರಕಾರವೇ ತಂದಿದ್ದ ಆದಿವಾಸಿ ಗಳಿಗೆ ಎರವಾಗಬಹುದಾಗಿದ್ದ ಮಸೂದೆಯನ್ನು ಒಪ್ಪದೇ ವಾಪಸ್‌ ಕಳಿಸಿದ್ದರು.ಅಂದರೆ ದಶಕಗಳ ಹಿಂದಿನ ಚೋಟಾ ನಾಗ್ಪುರ ಟೆನೆನ್ಸಿ(ಸಿಎನ್‌ಟಿ)ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿತ್ತು.ಅಂದರೆ, ಈ ಕಾಯ್ದೆ ಪ್ರಕಾರ, ಆದಿವಾಸಿಗಳು ಸರಕಾರದ ಒಪ್ಪಿಗೆ ಪಡೆಯದೇ ತಮ್ಮ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸಬಹುದಾಗಿತ್ತು. ಇದರ ಬದಲಾವಣೆಗೆ ಮುಂದಾದಾಗ ಆಗಿನ ಸಿಎಂ ರಘುವರ್‌ ದಾಸ್‌ ಅವರನ್ನು ಕರೆಸಿ ತಿದ್ದುಪಡಿಯ ಬಗ್ಗೆ ವಿವರಣೆ ಕೇಳಿ ಅದನ್ನು ವಾಪಸ್‌ ಕಳಿಸಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk