ಲೋಕಾಯುಕ್ತ ಬಲೆಗೆ ಬಿದ್ದ BEO – ಭ್ರಷ್ಟ BEO ನನ್ನು ಟ್ರ್ಯಾಪ್ ಮಾಡಿದ ನಿವೃತ್ತ ಶಿಕ್ಷಕ…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ BEO – ಭ್ರಷ್ಟ BEO ನನ್ನು ಟ್ರ್ಯಾಪ್ ಮಾಡಿದ  ನಿವೃತ್ತ ಶಿಕ್ಷಕ…..

ಚಾಮರಾಜನಗರ

ಲೋಕಾಯುಕ್ತ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಯೊಬ್ಬರು ಬಿದ್ದ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.ಗಳಿಕೆ ರಜೆ ಮಂಜೂರಾತಿಗೆ ಲಂಚಕ್ಕೆ  ಹನೂರು ಬಿಇಒ ಬೇಡಿಕೆ ಇಟ್ಟಿದ್ದರು ನಂತರ ಹಣ ತಗೆದುಕೊಳ್ಳುವಾಗ  ಲೋಕಾಯುಕ್ತ ಬಲೆಗೆ ಬಿದ್ದಿ ದ್ದಾರೆ.

ನಿವೃತ್ತ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ ಮಂಜೂರು ಮಾಡಲು ₹15 ಸಾವಿರ ಲಂಚ ಪಡೆಯುತ್ತಿದ್ದ ಹನೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ತಾಲ್ಲೂಕಿನ ತೋಮಿಯರ್‌ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.

139 ದಿನಗಳ ಗಳಿಕೆ ರಜೆಯ ಹಣ ₹3 ಲಕ್ಷ ಬರಬೇಕಾಗಿತ್ತು.ಗಳಿಕೆ ರಜೆ ಮಂಜೂರು ಮಾಡಲು ಶಿಕ್ಷಣಾಧಿಕಾರಿ ಶಿವರಾಜು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ನಿತೃತ್ತ ಶಿಕ್ಷಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿ, ₹15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ

ಲೋಕಾಯುಕ್ತ ಎಸ್‌ಪಿ ಸಜಿತ್‌ ಮತ್ತು ಡಿವೈಎಸ್‌ಪಿ ಮಾಥ್ಯೂಸ್‌ ಥೋಮಸ್‌ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಲೋಹಿತ್‌ ಕುಮಾರ್‌, ಶಶಿಕುಮಾರ್‌ ಸಿಬ್ಬಂದಿ ಮಹದೇವಸ್ವಾಮಿ, ಕುಮಾರ್‌ ಆರಾಧ್ಯ,ಮಹಾಲಿಂಗಸ್ವಾಮಿ, ಶ್ರೀನಿವಾಸ್‌, ಗುರು, ಗೌತಮ್, ಐಸಾಕ್‌ ಮತ್ತು ನಾಗೇಂದ್ರ ಕಾರ್ಯಾಚರಣೆ ನಡೆಸಿದ್ದರು

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.