ಚಾಮರಾಜನಗರ –
ಶಿಕ್ಷಕಿ ಸಾವು – ಮಹಡಿ ಮೇಲೆ ಉಯ್ಯಾಲೆ ಆಡುವಾಗ ಆಯತಪ್ಪಿ ಬಿದ್ದು ಶಿಕ್ಷಕಿ ಸಾವು ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘವು ಸೇರಿದಂತೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ.
ಹೌದು ಉಯ್ಯಾಲೆ ಆಡುವಾಗ ಆಯತಪ್ಪಿ ಶಿಕ್ಷಕಿಯೊಬ್ಬರು ಬಿದ್ದು ಸಾವಿಗೀಡಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಮನೆಯ ಮೇಲೆ ಉಯ್ಯಾಲೆಯಲ್ಲಿ ಆಟ ಆಡುವಾಗ ಕೆಳಗೆ ಬಿದ್ದು ಅಸ್ವಸ್ಥರಾಗಿದ್ದ ಶಿಕ್ಷಕಿ ಸಾವನ್ನಪ್ಪಿದ್ದಾರೆ ಕೊಳ್ಳೇಗಾ ಲದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.
ಶಿಕ್ಷಕಿ ಕೆ.ಪುಟ್ಟಿ(53) ಮೃತರಾದವರಾದವರಾ ಗಿದ್ದಾರೆ.ಪುಟ್ಟಿ ಅವರು ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘದ ತಾಲೂಕು ಅಧ್ಯಕ್ಷರು ಕೂಡ ಆಗಿದ್ದರು.ಮನೆಯ ಮೇಲೆ ಉಯ್ಯಾಲೆ ಆಡು ತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಶಿಕ್ಷಕಿ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಮನೆಯವರು ಅವರನ್ನು ಮೇಲೆತ್ತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ದರು.ಆದರೆ, ಚಿಕಿತ್ಸೆ ಫಲಿಸದೇ ಶಿಕ್ಷಕಿ ಮೃತಪಟ್ಟಿ ದ್ದಾರೆ.ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇನ್ನೂ ಶಿಕ್ಷಕಿ ಯ ಸಾವಿಗೆ ನಾಡಿನ ಶಿಕ್ಷಕ ಬಂಧುಗಳು ಅದರ ಲ್ಲೂ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘದ ಸರ್ವ ಸದಸ್ಯರು ತೀವ್ರವಾದ ಸಂತಾಪವನ್ನು ಸೂಚಿಸಿದ್ದಾರೆ.
ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘದ ಕಾರ್ಯ ಕಾರಣಿ ಸಭೆಯಲ್ಲಿ ಪಾಲ್ಗೊಂಡಿದ್ದರು ಸಧ್ಯ ಇವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ.
ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..