ದೆಹಲಿ –
ಡಿನೋಫಿಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿ ಅವ್ರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್ ತೀರ್ಪಿಗೆ ತಡೆ ಹಿಡಿದಿರುವ ಸುಪ್ರೀಂ ಸಿಎಂ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಅವರನ್ನು ಬಂಧಿಸಬೇಡಿ ಎಂದು ಸೂಚನೆ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ತನಿಖೆ ತಡೆ ನೀಡಲು ನಿರಾಕರಿಸಿತ್ತು ಮತ್ತು ಅವ್ರನ್ನ ಬಂಧಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿತ್ತು. ಹಾಗಾಗಿ ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಬಿಎಸ್ವೈ ಮತ್ತು ಮುರಗೇಶ ನಿರಾಣಿ ಸುಪ್ರೀಂಕೋರ್ಟ್ʼಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ಹಿಡಿದಿದ್ದು, ಸಿಎಂ ಮತ್ತು ಸಚಿವ ಮುರುಗೇಶ್ ನಿರಾಣಿ ಅವರನ್ನು ಬಂಧಿಸುವುದು ಬೇಡ ಎಂದಿದೆ.ಈ ಮೂಲಕ ಸಧ್ಯಕ್ಕೆ ಪ್ರಕರಣದ ತನಿಖೆಯಿಂದ ಸಿಎಂ ಮತ್ತು ಸಚಿವ ನಿರಾಣಿ ಪಾರಾಗಿದ್ದಾರೆ.