ಜನಸ್ನೇಹಿಯಾಗಿದ್ದಾರೆ ಪಾಲಿಕೆಯ ಆಯುಕ್ತರು – ವಾರದಲ್ಲಿ ಎರಡು ದಿನ ಧಾರವಾಡ ಉಳಿದ ದಿನ ಹುಬ್ಬಳ್ಳಿಯಲ್ಲಿ ಸಮಯ ಲೆಕ್ಕಿಸದೇ ಕಚೇರಿಯಲ್ಲಿಯೇ ಸಿಗ್ತಾರೆ…..

Suddi Sante Desk
ಜನಸ್ನೇಹಿಯಾಗಿದ್ದಾರೆ ಪಾಲಿಕೆಯ ಆಯುಕ್ತರು – ವಾರದಲ್ಲಿ ಎರಡು ದಿನ ಧಾರವಾಡ ಉಳಿದ ದಿನ ಹುಬ್ಬಳ್ಳಿಯಲ್ಲಿ ಸಮಯ ಲೆಕ್ಕಿಸದೇ ಕಚೇರಿಯಲ್ಲಿಯೇ ಸಿಗ್ತಾರೆ…..

ಹುಬ್ಬಳ್ಳಿ –

ಸಾಮಾನ್ಯವಾಗಿ ಒಂದು ಇಲಾಖೆಯ ಅಧಿಕಾರಿ ಗಳೆಂದರೆ ಬಿಡುವಿಲ್ಲದ ಕೆಲಸ ಕಾರ್ಯಗಳು ಆ ಸಭೆ ಈ ಸಭೆ ಇದರೊಂದಿಗೆ ಕಚೇರಿ ಹೀಗೆ ಬಿಡು ವಿಲ್ಲದ ಕೆಲಸ ಕಾರ್ಯಗಳು ಇದ್ದೇ ಇರುತ್ತವೆ ಇಷ್ಟೇಲ್ಲದರ ನಡುವೆ ಯಾರೇ ಯಾವುದೇ ಸಮಸ್ಯೆಗಳನ್ನು ಇಟ್ಟುಕೊಂಡು ಕಚೇರಿಗೆ ಹೋದ್ರೆ ಸಾಕು ಸ್ವತಃ ಅವರೇ ಸಮಸ್ಯೆಗಳನ್ನು ಪರಿಹಾರ ಮಾಡಿ ಕಳಿಸ್ತಾರೆ

ಸಮಸ್ಯೆ ಹೊತ್ತು ಕೊಂಡು ಬಂದವರಿಗೆ ಸ್ಪಂದಿಸಿ ಪರಿಹಾರ ಮಾಡಿ ಕಳಿಸುತ್ತಾರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು.ಹೌದು ಪಾಲಿಕೆಯ ಆಯುಕ್ತರು ಎಂದರೆ ಸಾಕಷ್ಟು ಒತ್ತಡ ಬಿಡುವಿಲ್ಲದ ಕೆಲಸ ಕಾರ್ಯಗಳು ಸುತ್ತಾಟ ಹೀಗೆ ಒಂದಲ್ಲ ಒಂದು ಕಾರ್ಯಗಳು ಇದ್ದೇ ಇರುತ್ತವೆ ಹೀಗಿರುವಾಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಸಾರ್ವಜನಿಕರ ಪಾಲಿಕೆಯ ಸದಸ್ಯರ ಇಲಾಖೆಯ ಅಧಿಕಾರಿಗಳ ಪ್ರತಿಯೊಂದು ಸಮಸ್ಯೆ ಗೆ ಸ್ಪಂದಿ ಸುತ್ತಿದ್ದಾರೆ.

ಹೌದು ಈಗಷ್ಟೇ ಪಾಲಿಕೆಗೆ ಆಯುಕ್ತರಾಗಿ ಬಂದಿ ರುವ ಡಾ ಈಶ್ವರ ಉಳ್ಳಾಗಡ್ಜಿಯವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅನುಭವ. ವನ್ನು ಹೊಂದಿದ್ದು ಹೀಗಾಗಿ ಪ್ರತಿಯೊಂದು ಪೈಲ್ ಗಳನ್ನು ತಾವೇ ಖುದ್ದಾಗಿ ನೋಡಿ ಸಹಿಗಳನ್ನು ಮಾಡುತ್ತಿರುವ ವಿಚಾರ ಒಂದು ಕಡೆಯಾದರೆ ಇನ್ನೂ ಪಾಲಿಕೆಯ ಸದಸ್ಯರು ಯಾವುದೇ ಅನು ದಾನದ ಪೈಲ್ ಗಳನ್ನು ಹಿಡಿದುಕೊಂಡು ಬಂದರೆ ಅಥವಾ ಕೇಳಿಕೊಂಡು ಬಂದರೆ ಕೂಡಿಸಿ ವಿಚಾರಿಸಿ ಕೂಡಲೇ ಅನುದಾನದ ಪೈಲ್ ಗಳಿಗೆ ಸಹಿ ಹಾಕಿ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ವೇಗ ನೀಡಿದ್ದಾರೆ.

ಪಾಲಿಕೆಯ ಯಾವುದೇ ಸದಸ್ಯರು ಬರಲಿ ವಿರೋಧ ಪಕ್ಷದವರು ಬರಲಿ ಹೀಗೆ ಯಾರು ಬಂದರು ಕೂಡಾ ಪೊನ್ ನಲ್ಲಿ ಆಗಲಿ ಇಲ್ಲವೇ ಕಚೇರಿಯಲ್ಲಿ ಆಗಲಿ ತಡವಾದರೂ ಕೂಡಾ ಕಚೇರಿಯ ಸಮಯವನ್ನು ಲೆಕ್ಕಿಸದೇ ಸಾರ್ವ ಜನಿಕರಿಗೆ ಪಾಲಿಕೆಯ ಸದಸ್ಯರಿಗೆ ಸೇರಿದಂತೆ ಪ್ರತಿಯೊಬ್ಬರು ಹತ್ತಿರವಾಗಿ ಸಿಗುತ್ತಿದ್ದಾರೆ.

ಪಾಲಿಕೆಗೆ ಆಯುಕ್ತರಾಗಿ ಬಂದ ಮೇಲೆ ಇಲಾಖೆ ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಗ ಳಾಗಿದ್ದು ಯುವ ಉತ್ಸಾಹಿ ಆಗಿರುವ ಡಾ ಈಶ್ವರ ಉಳ್ಳಾಗಡ್ಡಿಯವರು ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.ವಾರದಲ್ಲಿ ಎರಡು ದಿನ ಮಂಗಳವಾರ ಶುಕ್ರವಾರ ಧಾರವಾಡ ಕಚೇರಿಯಲ್ಲಿ ಇನ್ನೂಳಿದಂತೆ ಹುಬ್ಬಳ್ಳಿ ಯ ಪಾಲಿಕೆಯ ಕಚೇರಿಯಲ್ಲಿ ಆಯುಕ್ತರು ಸುಲಭವಾಗಿ ಪ್ರತಿಯೊಬ್ಬರಿಗೂ ಸಿಗುತ್ತಿದ್ದು

ಯಾರೇ ಯಾವುದೇ ಸಮಸ್ಯೆಗಳನ್ನು ಹೊತ್ತು ಕೊಂಡು ಬಂದರೆ ತಾವೇ ಸ್ವತಃ ಸಂಬಂಧಿಸಿದ ಪಾಲಿಕೆಯ ಅಧಿಕಾರಿಗಳಿಗೆ ಪೊನ್ ಕರೆ ಮಾಡಿ ಸಮಸ್ಯೆ ಕುರಿತಂತೆ ಸೂಚನೆಯನ್ನು ನೀಡುತ್ತಿ ರೊದು ಕಂಡು ಬರುತ್ತಿದೆ ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರಾಗಿರುವ ಡಾ ಈಶ್ವರ ಉಳ್ಳಾಗಡ್ಡಿಯವರು ಜನಸ್ನೇಹಿ ಆಯುಕ್ತರಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಪ್ರತಿಯೊಬ್ಬ ಪಾಲಿಕೆಯ ಸದಸ್ಯರು ಸಾರ್ವಜನಿಕರು ಒಳ್ಳೇಯ ಅಧಿಕಾರಿ ಎನ್ನುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.