ಮಡಿಕೇರಿ –
ಡಾ ಬಿ ಆರ್ ಅಂಬೇಡ್ಕರ್ ವಿಚಾರಧಾರೆ ಬಗ್ಗೆ ಮಾತನಾ ಡದಂತೆ ವಿದ್ಯಾರ್ಥಿಯೊಬ್ಬರಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾರೆಂದುಕೊಂಡು ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಹೌದು ಸೋಮವಾರ ಪೇಟೆ ತಾಲ್ಲೂಕಿನ ಕಲ್ಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಧರ್ಮರಾಜ್ ಅಮಾನ ತುಗೊಂಡ ಶಿಕ್ಷಕರಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ದಿನದಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಇವರ ಕುರಿತಂತೆ ಮಾತನಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಒಂದು ವಿಚಾರ ಕುರಿತಂತೆ ವಿದ್ಯಾರ್ಥಿಗೆ ಶಿಕ್ಷಕ ಧರ್ಮರಾಜ್ ಅವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರಂತೆ ಈ ಕುರಿತಂತೆ ಆಡಿಯೋ ಕೂಡಾ ವೈರಲ್ ಆಗಿದ್ದು ಅನುಚಿತವಾದ ವರ್ತನೆ ತೋರಿದ ಕಾರಣ ಕ್ಕಾಗಿ ಜಿಲ್ಲಾಧಿಕಾರಿಗಳು ಶಿಕ್ಷಕರ ಮೇಲೆ ಸೂಕ್ತವಾದ ಕ್ರಮ ವನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದರು ಈ ಒಂದು ಕಾರಣಕ್ಕಾಗಿ ಡಿಡಿಪಿಐ ಅವರು ಶಿಕ್ಷಕನನ್ನು ಅಮಾ ನತು ಮಾಡಿ ಆದೇಶವನ್ನು ಮಾಡಿದ್ದಾರೆ.