ಹಾರ್ಟ್ ಅಟ್ಯಾಕ್  ಚಿಗರಿ ಬಸ್ ಚಾಲಕ ಬಸವರಾಜ ಬಿಲ್ಲಾಳ ಸಾವು – ಮೃತಪಟ್ಟ ಚಾಲಕನಿಗೆ ಕಂಬನಿ ಮಿಡಿದ ಸಹೋದ್ಯೋಗಿ ಬಸ್ ಚಾಲಕರು…..

Suddi Sante Desk
ಹಾರ್ಟ್ ಅಟ್ಯಾಕ್  ಚಿಗರಿ ಬಸ್ ಚಾಲಕ ಬಸವರಾಜ ಬಿಲ್ಲಾಳ ಸಾವು – ಮೃತಪಟ್ಟ ಚಾಲಕನಿಗೆ ಕಂಬನಿ ಮಿಡಿದ ಸಹೋದ್ಯೋಗಿ ಬಸ್ ಚಾಲಕರು…..

ಹುಬ್ಬಳ್ಳಿ

ಹಾರ್ಟ್ ಅಟ್ಯಾಕ್  ಚಿಗರಿ ಬಸ್ ಚಾಲಕ ಬಸವರಾಜ ಬಿಲ್ಲಾಳ ಸಾವು – ಮೃತಪಟ್ಟ ಚಾಲಕನಿಗೆ ಕಂಬನಿ ಮಿಡಿದ ಸಹೋದ್ಯೋಗಿ ಬಸ್ ಚಾಲಕರು…..

ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡು ತ್ತಿರುವ ಬಿಆರ್ ಟಿಎಸ್ ನಲ್ಲಿ ದಿನದಿಂದ ದಿನಕ್ಕೆ ಚಾಲಕರಿಗೆ ಒತ್ತಡವಾಗುತ್ತಿದೆ ಎಂಬೊದಕ್ಕೆ ಪ್ರತಿದಿನ ಕಂಡು ಬರುತ್ತಿರುವ ಚಿತ್ರಣಗಳೇ ಸಾಕ್ಷಿ.ಅವಳಿ ನಗರದ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಈ ಒಂದು ಬಸ್ ಗಳು ಇಂದು ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ವಾಗಿ ಸಂಪೂರ್ಣವಾಗಿ ಹಾಳಾಗಿದ್ದು ಇದರಿಂದಾಗಿ ಚಾಲಕರು ಒತ್ತಡದಿಂದ ಕೆಲಸವನ್ನು ಮಾಡ್ತಾ ಇದ್ದು

ಸಧ್ಯ ಚಾಲಕರೊಬ್ಬರು ಹೃದಯಾಘಾತದಿಂದ ನಿಧನ ರಾಗಿದ್ದಾರೆ.ಹಾರ್ಟ್ ಅಟ್ಯಾಕ್ ಗೆ ಚಾಲಕರೊಬ್ಬರು ಬಲಿಯಾಗಿದ್ದು 54 ವರ್ಷದ ಬಸವರಾಜ ಬಿಲ್ಲಾಳ ಅವರೇ ಮೃತ ಚಾಲಕರಾಗಿದ್ದಾರೆ.ಧಾರವಾಡ ಚಿಗರಿ ಡಿಪೋ ದಲ್ಲಿ ಚಾಲಕರಾಗಿದ್ದ ಬಿಲ್ಲಾಳ ಅವರು ಮೂಲತಃ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದವರಾ ಗಿದ್ದು ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು  ಬಸವರಾಜ ಬಿಲ್ಲಾಳ ನಿಧನಕ್ಕೆ ಸಂತಾಪ ಸೂಚಿಸಿದ್ದು  ಚಾಲಕರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು  ಇವರ ನಿಧನಕ್ಕೆ ಚಂದ್ರಶೇಖರ ಪಿ,ನಾಗರಾಜ ಬರಮ ಗೌಡರ,ಚಂದ್ರಶೇಖರ ಇಂಗಹಳ್ಳಿ,ಗಣೇಶ ಹಿತ್ತಲಮನಿ,ಗಾಂಧೀ ಸುಣಗದ,ಸಂತೋಷ ಮಾದರ,ಪ್ರವೀಣ ಕದಂ,ಶಿವು ಹಿರೇಮಠ,ವಿಠ್ಠಲ ರಾಮದುರ್ಗ,ವಿಠ್ಠಲ ಪಾಮ್ಮೋಜಿ,ಚಿಕನ್ ಸ್ವಾಮೀಜಿ,

ನಿಂಗಪ್ಪ ಶಿಂಧೆ,ಸಾಯಿರಾಮ್ ರೆಡ್ಡಿ,ಕಿರಣ್ ಜಿರಿಗವಾಡ,ಜಗದೀಶ್ ಬಿಕೆ,ಸುರೇಶ್ ಕಮ್ಮಾರ, ಶಂಭುಲಿಂಗ ಸಾಂಬ್ರಾಣಿ,ಮಂಜು ಹಂಪನ್ನವರ,ಲಕ್ಷ್ಮಣ ಯಡಹಳ್ಳಿ,ರಾಜು ತೀರ್ಲಾಪೂರ,ನಾಗರಾಜ ಬೆಂಗೇರಿ,ಮಂಜು ಜಾಧವ,ಮಂಜುನಾಥ ಶಿವಶಿಂಪಿಗೇರಿ,ಶಿವಪ್ಪ ಇಟಿಗಟ್ಟಿ,ಕುಮಾರ್ ಹೊಸಮನಿ,ಮಂಜು ಚಿಕ್ಕಮಠ,ಜಿ ಬಿ ಅಂಗಡಿ,ರಾಜು ಚವ್ಹಾಣ,ಗಂಗಾಧರ ಸಂಕನಾಳ,ಬಸಯ್ಯ ಕೋಟಬಾಗಿ,ಮಂಜು ಕಠಾರೆ,ರಾಜು ದೊಡಮನಿ, ರಾಘು ಜುಂಜನ್ನವರ ಸೇರಿದಂತೆ ಸಹೋದ್ಯೋಗಿ ಚಾಲಕ ಮಿತ್ರರು ಸಂತಾಪವನ್ನು ಸೂಚಿಸಿದ್ದಾರೆ .ಲಕ್ಕುಂಡಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.