ಧಾರವಾಡ
ಮರವೊಂದು ವಿದ್ಯುತ್ ಕಂಬವೊಂದರ ಮೇಲೆ ಬಿದ್ದ ಪರಿಣಾಮವಾಗಿ ಎಂಟಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಜರ್ಮನ್ ಆಸ್ಪತ್ರೆಯ ಸರ್ಕಲ್ ನ ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದೆ ಪರಿಣಾಮವಾಗಿ ಏಕಾಏಕಿಯಾಗಿ ಎಂಟಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ.

ಪರಿಣಾಮವಾಗಿ ನಗರದ ಜರ್ಮನ್ ಆಸ್ಪತ್ರೆಯ ಸುತ್ತ ಮುತ್ತಲಿನ ಕೆಲ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಬಂದ್ ಆಗಿದೆ.ಇನ್ನೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ರಸ್ತೆಯಲ್ಲಿ ಸಂಚಾರವೂ ಬಂದ್ ಆಗಿದೆ.

ಇನ್ನೂ ವಿಷಯ ತಿಳಿದ ಹೆಸ್ಕಾಂ ಸಿಬ್ಬಂದಿಗಳು ಪರಿಶೀಲನೆ ಮಾಡತಾ ಇದ್ದಾರೆ. ಇತ್ತ ಧಾರವಾಡ ಸಂಚಾರಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. Asi A R. ನಾಗನೂರು, ಸಿಬ್ಬಂದಿ ಗಳಾದ ಲಕ್ಷ್ಮಣ ಲಮಾಣಿ, ಹೊಸಮನಿ ,ಲಿಂಗರಾಜ ನಾಯಕ,ಸ್ಥಳದಲ್ಲಿ ಇದ್ದರು

ಇನ್ನೂ ರಾತ್ರಿಯಲ್ಲಿ ಸಮಸ್ಯೆ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಕತ್ತಲಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.