ಮಲ್ಲಾಪೂರ –
ಸಾಮಾನ್ಯವಾಗಿ ವೈದ್ಯರು ಎಂದರೇ ಜೀವವನ್ನು ಕಾಪಾಡುವವರು ಬಿಡುವಿಲ್ಲದ ಕೆಲಸ ಕಾರ್ಯ ಗಳ ನಡುವೆ ಸದಾ ಒತ್ತಡದ ಜೀವನವನ್ನು ಇವರು ನಡೆಸುತ್ತಿರುತ್ತಾರೆ.ಹೀಗಿರುವಾಗ ಇಲ್ಲೊಬ್ಬ ವೈದ್ಯರೊಬ್ಬರು ಬಿಡುವಿಲ್ಲದ ವೃತ್ತಿಯ ನಡುವೆಯೂ ಕೂಡಾ ಸಮಾಜ ಮೆಚ್ಚುವ ಕೆಲಸವನ್ನು ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿರುವ ವೈದ್ಯರ ಪಟ್ಟಿಗೆ ಸೇರ್ಪಡೆ ಗೊಂಡಿದ್ದಾರೆ.ಹೌದು ಇದಕ್ಕೆ ತಾಜಾ ಉದಾಹರಣೆ ಡಾ ವಿರೇಶ ಬಸವರಾಜ ಸತ್ತಿಗೇರಿ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಯುವ ವೈದ್ಯ.ಚಿಕ್ಕ ವಯಸ್ಸಿನಲ್ಲಿ ವೈದ್ಯರಾಗಿರುವ ಇವರು ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸಾಕಷ್ಟು ಹೆಸರನ್ನು ಮಾಡಿರುವ ಇವರು ಸಧ್ಯ ಮತ್ತೊಂದು ಮಾದರಿ ಕೆಲಸದ ಮೂಲಕ ಈಗ ರಾಜ್ಯದ ವೈದ್ಯರಿಗೆ ಮಾದರಿಯಾ ಗಿದ್ದಾರೆ.ಅಷ್ಟಕ್ಕೂ ಇವರು ಮಾಡಿರುವ ಕೆಲಸ ವನ್ನು ಒಮ್ಮೆ ನೊಡೊದಾದರೆ ಹುಬ್ಬಳ್ಳಿಯ ಪವಾಡ ಪುರುಷ ಸಿದ್ದಾರೂಢರ ಭಕ್ತರಾಗಿರುವ ಡಾ ವಿರೇಶ ಸತ್ತಿಗೇರಿಯವರು ಟ್ರಸ್ಟ್ ವೊಂದನ್ನು ಆರಂಭ ಮಾಡಿ ಗ್ರಾಮದಲ್ಲಿ ಇದರ ಮೂಲಕ ಹಲವಾರು ಸಾಮಾಜಮುಖಿ ಕೆಲಸ ಕಾರ್ಯಗ ಳನ್ನು ಮಾಡುತ್ತಿದ್ದು
ಇದರೊಂದಿಗೆ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಶಿಕ್ಷಕರೊಬ್ಬರಿಗೆ ಉಚಿತವಾಗಿ ಉಳಿದುಕೊ ಳ್ಳುವ ಎಲ್ಲಾ ವ್ಯವಸ್ಥೆಯನ್ನು ಮಾಡಿ ಅವರೊಂ ದಿಗೆ ಟ್ರಸ್ಟ್ ನಲ್ಲಿಯೇ ಗ್ರಾಮದಲ್ಲಿನ ಮಕ್ಕಳಿಗೆ ಟ್ಯೂಶನ್ ನೀಡುತ್ತಿದ್ದಾರೆ.ಸಾಮಾನ್ಯವಾಗಿ ಗ್ರಾಮದಲ್ಲಿನ ಮಕ್ಕಳು ನಗರ ಪ್ರದೇಶದ ಮಕ್ಕಳ ಹಾಗೇ ಪ್ರತಿಯೊಂದರಲ್ಲೂ ಬೆಳೆಯಬೇಕು ಎಂದುಕೊಂಡು ಸಧ್ಯ ಗ್ರಾಮದಲ್ಲಿನ ಮಕ್ಕಳಿಗೆ ಟ್ಯೂಶನ್ ವ್ಯವಸ್ಥೆಯನ್ನು ಮಾಡಿದ್ದಾರೆ.
ಹೀಗಾಗಿ ಸಧ್ಯ ಇದಕ್ಕಾಗಿ ಒರ್ವ ವಿಶೇಷ ಶಿಕ್ಷಕರೊಬ್ಬರು ನೇಮಕಗೊಂಡಿದ್ದು ಪ್ರತಿನಿತ್ಯ ಸಧ್ಯ ಟ್ಯೂಶನ್ ಆರಂಭಗೊಂಡಿದ್ದು ಕಲಿಕಾ ಕಾರ್ಯ ನಡೆಯುತ್ತಿದೆ ಹೀಗಾಗಿ ವೈದ್ಯ ಡಾ ವಿರೇಶ ಸತ್ತಿಗೇರಿಯವರು ತಮ್ಮ ವೃತ್ತಿಯೊಂದಿಗೆ ಇಂತಹದೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿ ಆರಂಭ ಮಾಡಿದ್ದಾರೆ ಈ ಒಂದು ಕಾರ್ಯವನ್ನು ಗ್ರಾಮಸ್ಥರು ಮೆಚ್ಚಕೊಂಡಿದ್ದು ಉತ್ಸಾಹದಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳನ್ನು ಕಳಿಸಿ ಕೊಡುತ್ತಿದ್ದಾರೆ.
ಅಜ್ಜಪ್ಪ ಕಂಬಿ ಅವರಿಂದ 5 ನೆ ತರಗತಿಯಿಂದ 10 ನೆ ತರಗತಿಯ ಮಕ್ಕಳಿಗೆ ಟುಶನ್ ತರಬೇತಿ ನಡೆ ಯುತ್ತಿದು ಇದರ ಲಾಭವನ್ನು ಪಡೆದುಕೊಳ್ಳು ವಂತೆ ವೈದ್ಯ ಡಾ ವಿರೇಶ ಸತ್ತಿಗೇರಿ ಗ್ರಾಮಸ್ಥರಲ್ಲಿ ವಿದ್ಯಾರ್ಥಿಗಳಲ್ಲಿ ಕರೆ ನೀಡಿದ್ದು ಇನ್ನೂ ಈ ಒಂದು ಕಾರ್ಯವೂ ನಿಜಕ್ಕೂ ಮಾದರಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಟ್ಯೂಶನ್ ಅಂದರೆ ಕನಸಿನ ಮಾತು ಹೀಗಿರುವಾಗ ಗ್ರಾಮ ದಲ್ಲಿ ಈ ಒಂದು ಟ್ಯೂಶನ್ ಆರಂಭ ಮಾಡಿದ್ದು ಒಳ್ಳೇಯ ಕೆಲಸವಾಗಿದ್ದು ಡಾ ವಿರೇಶ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವರದಿ – ಸುದ್ದಿ ಸಂತೆ ನ್ಯೂಸ್ ರೋಣ……