ಅಮೃತ ದೇಸಾಯಿಗೆ ಶಕ್ತಿ ತುಂಬಿದ ಕ್ಷೇತ್ರದ ಹಿರಿಯರು – ಕ್ಷೇತ್ರದಲ್ಲಿ ನಡೆಯುತ್ತಿದೆ ಅಬ್ಬರದ ಪ್ರಚಾರ…..

Suddi Sante Desk
ಅಮೃತ ದೇಸಾಯಿಗೆ ಶಕ್ತಿ ತುಂಬಿದ ಕ್ಷೇತ್ರದ ಹಿರಿಯರು – ಕ್ಷೇತ್ರದಲ್ಲಿ ನಡೆಯುತ್ತಿದೆ ಅಬ್ಬರದ ಪ್ರಚಾರ…..

ಧಾರವಾಡ

2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಯ ಚುನಾವಣೆಯ ಪ್ರಚಾರ ಜೋರಾಗುತ್ತಿದ್ದು ಇತ್ತ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲೂ ರಂಗೇರುತ್ತಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಭರ್ಜರಿ ಯಾಗಿ ಪ್ರಚಾರ ಮಾಡುತ್ತಿದ್ದಾರೆ.ಹೌದು ಧಾರವಾಡ ತಾಲೂಕಿನ ತಳವಾಯಿ,ಚಂದನಮಟ್ಟಿ ಮತ್ತು ಕವಳಗೇರಿ ಗ್ರಾಮಗಳಿಗೆ ಭೇಟಿಕೊಟ್ಟು.ಮೂರು ಗ್ರಾಮಗಳಲ್ಲಿ ನೂರಾರು ಜನರೊಂದಿಗೆ ಪಾದ ಯಾತ್ರೆ ಮಾಡಿದರು

ಆ ಗ್ರಾಮಗಳ ಮನೆ ಮನೆಗೂ ತೆರಳಿ ಅವರ ಸಹಕಾರ ಮತ್ತು ಬೆಂಬಲದಿಂದ ಈ ವರೆಗೆ ನನ್ನ ಅಧಿಕಾರ ಅವಧಿಯಲ್ಲಿ ಧಾರವಾಡ ಕ್ಷೇತ್ರಾಭೀವೃ ದ್ಧಿಗಾಗಿ ನಾನು ಕೈಗೊಂಡ ಅಭಿವೃದ್ಧಿ ಯೋಜನೆ ಗಳ ಬಗ್ಗೆ ತಿಳಿಸಿ ಅವರೆಲ್ಲರ ಪ್ರೀತಿ ವಿಶ್ವಾಸದಿಂದ ಬಿಜೆಪಿ ಸರ್ಕಾರ ಮತ್ತೊಂದು ಬಾರಿ ನನಗೆ ಸ್ಪರ್ಧೆ ಸಲು ಅವಕಾಶ ಕೊಟ್ಟಿದ್ದಾರೆ

ಈ ಮುಂಬರುವ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರಗಳ ಸಂಪೂರ್ಣ ಅಭೀವೃದ್ಧಿ ಗಾಗಿ ಮತ್ತೆ ನನ್ನನ್ನು ಗೆಲ್ಲಿಸಿ ಹಾಗೆ ದೇಶದಲ್ಲಿ ಅಭಿವೃದ್ಧಿಯುತ,ಉತ್ತಮವಾದ ಮತ್ತು ಶಾಂತಿ ಯುತವಾದ ಆಡಳಿತಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿ ಎಲ್ಲೆಡೆ ಕರಪತ್ರ ಹಂಚಿ ಮತಯಾಚನೆ ಮಾಡಿದರು

ಈ ಸಂಧರ್ಭದಲ್ಲಿ ಸೀಮಾ ಮಸೂತಿ, ಗುರುನಾಥಗೌಡ ಗೌಡರ,ಗಂಗಾಧರ್ ಪಾಟೀಲ ಕುಲಕರ್ಣಿ, ನಾಗನಗೌಡ ನೀರಲಗಿ,ಸವಿತಾ ಅಮರಶೆಟ್ಟಿ ಸೇರಿದಂತೆ ಆ ಗ್ರಾಮಗಳ ಗುರು ಹಿರಿಯರು, ಯುವಕರು ಮತ್ತು ಎಲ್ಲ ಗ್ರಾಮಸ್ಥರು ನನ್ನೊಂದಿಗೆ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.