ಬೆಂಗಳೂರು –
ಸ್ವತಂ ಊರಿಗೆ ಜಿಲ್ಲೆಗೆ ವರ್ಗಾವಣೆ ಬಯಸಿ ಹಾಗೇ ವರ್ಗಾ ವಣೆಯಲ್ಲಿ ಶೇಕಡಾ 25 ನ್ನು ತಗೆಯುವ ವಿಚಾರ ಕುರಿತಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಶಿಕ್ಷಕರ ಪ್ರತಿಭಟನೆ ಮೂರನೇಯ ದಿನಕ್ಕೆ ಕಾಲಿಟ್ಟಿದೆ.ಹೌದು ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಟನೆಯಲ್ಲಿ ಪುರುಷರು,ಮಹಿಳೆ ಯರು ಸೇರಿದಂತೆ ನೂರಾರು ಸರ್ಕಾರದ ಶಿಕ್ಷಕರು ಭಾಗಿ ಯಾಗಿದ್ದು ಬೇಸಿಗೆ ಇದ್ದರೂ ಕೂಡಾ ಹೋರಾಟ ಮಾಡು ತ್ತಿದ್ದು ಕೆಲವು ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಈ ಒಂದು ಹೋರಾಟದಲ್ಲಿ ಪಾಲ್ಗೊಂಡಿದ್ದು ಸೇವಾವಧಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಕು ಎಂದು ಪ್ರತಿಭಟನೆ ಮಾಡಲಾಗುತ್ತಿದೆ.

ಶಿಕ್ಷಕರಾಗಿ ಹದಿನೈದು ವರ್ಷಗಳು ಕಳೆದರೂ ವರ್ಗಾವಣೆ ಇಲ್ಲ.ಸ್ವಂತ ಊರಿಗೆ ವರ್ಗಾವಣೆ ಮಾಡಿ,ಇಲ್ಲದಿದ್ದರೆ ವಿಷ ವನ್ನು ಕೊಡಿ ಎಂದು ಟೀಚರ್ಸ್ ಆಕ್ರೋಶವನ್ನು ಹೊರಹಾ ಕಿದ್ದು, ಸರ್ಕಾರಿ ಪ್ರೈಮರಿ ಶಿಕ್ಷಕರಿಂದ ನಗರದ ಕಬ್ಬನ್ ಪಾರ್ಕ್ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಪ್ರತಿಭ ಟನೆ ಮಾಡುತ್ತಿದ್ದಾರೆ.ಹದಿನೈದು ವರ್ಷಗಳಿಂದ ಒಂದೇ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಫ್ಯಾಮಿಲಿಯಿಂದ ದೂರವಾಗಿ ಖಿನ್ನತೆ ಒಳಗಾಗುತ್ತಿದ್ದಾರೆ.



ಹದಿನೈದು ವರ್ಷಗಳಿಂದ ಸ್ವಂತ ಊರು ಫ್ಯಾಮಿಲಿ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹದಿನೈದು ವರ್ಷಗಳಿಂದ ವರ್ಗಾವಣೆ ಇಲ್ಲಿದೆ ಇರುವುದ ರಿಂದ ಸಂಬಂಧಗಳು ದೂರ ಆಗುತ್ತಿವೆ.ಇದರಿಂದಾಗಿ ಟೀಚರ್ ಫ್ಯಾಮಿಲಿಗಳಲ್ಲಿ ಅನೇಕ ಅಹಿತಕರ ಘಟನೆಗಳು ಆಗಿವೆ.ಪ್ರತಿಭಟನೆಯಲ್ಲಿ ಪುರುಷರು
ಮಹಿಳೆಯರು ಸೇರಿದಂತೆ ನೂರಾರು ಸರ್ಕಾರದ ಶಿಕ್ಷಕರು ಭಾಗಿಯಾಗಿದ್ದು ಸೇವಾವಧಿಯಲ್ಲಿ ಒಮ್ಮೆ ಸ್ವಂತ ಜಿಲ್ಲೆಗೆ ವರ್ಗಾವಣೆ ಬೇಕು ಎಂದು ಪ್ರತಿಭಟನೆ ಮಾಡಲಾಗುತ್ತಿದೆ.