ತುಮಕೂರು –
ಹೃದಯಾಘಾತದಿಂದ15 ವರ್ಷದ ಬಾಲಕ ನೊರ್ವ ಸಾವಿಗೀಡಾದ ಘಟನೆ ತುಮಕೂರು ನಲ್ಲಿ ನಡೆದಿದೆ ಜಿಲ್ಲೆಯಲ್ಲಿ ಈ ಒಂದು ಹೃದಯಾ ಘಾತದಿಂದ ಸಾವಿಗೀಡಾದ ಬಾಲಕನ ಪ್ರಕರಣ ಆತಂಕ ವನ್ನುಂಟು ಮಾಡಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವಿಗೀಡಾಗಿದ್ದು ಭೀಮಾಶಂಕರ್ (15) ಸಾವನ್ನಪ್ಪಿದ ವಿದ್ಯಾರ್ಥಿ ಯಾಗಿದ್ದಾನೆ.
ತುಮಕೂರು ತಾಲ್ಲೂಕಿನ ಚಿಕ್ಕತೊಟ್ಟಿಲು ಕೆರೆ ಬಳಿ ಈ ಒಂದು ಘಟನೆ ನಡೆದಿದೆ.ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್ ಮೃತನಾದ ಬಾಲಕನಾಗಿದ್ದಾನೆ
ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ.ಚಿಕ್ಕತೊಟ್ಟಿಲು ಕೆರೆ ಬಳಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿ ಯಾಗಿದ್ದನು.ಕ್ರೀಡಾ ಕೂಟದಲ್ಲಿ ದ್ವೀತಿಯ ಬಹುಮಾನ ಪಡೆದಿದ್ದ ಭೀಮಾಶಂಕರ್.
ಬಹುಮಾನ ಪಡೆಯುವ ಮೊದಲೇ ಹೃದ ಯಾಘಾತ.ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣಬಿಟ್ಟಿದ್ದ ವಿದ್ಯಾರ್ಥಿ. ಸದ್ಯ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ನಡೆಯಲಿದೆ.ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..