ಹುಬ್ಬಳ್ಳಿ –
ಬಸ್ ನಿಲ್ದಾಣದಲ್ಲಿಯೇ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಚೇತನಾ ಕಾಲೇಜು ಮುಂದಿನ ಬಸ್ ನಿಲ್ದಾಣದಲ್ಲಿ ಈ ಒಂದು ಘಟನೆ ನಡಿದೆದೆ.

ಆತ್ಮಹತ್ಯೆ ಮಾಡಿಕೊಂಡವನ ಸುದ್ದಿ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು.ಇನ್ನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ 40 ವಯಸ್ಸಿನ ವ್ಯಕ್ತಿಯಾಗಿದ್ದು ಈತ ಬಸ್ ನಿಲ್ದಾಣದಲ್ಲಿಯೇ ಯಾಕೇ ನೇಣಿಗೆ ಶರಣಾಗಿದ್ದಾನೆ.

ಇನ್ನು ಮೃತಪಟ್ಟ ವ್ಯಕ್ತಿಯ ಮಾಹಿತಿ ಹೀಗೆ ಎಲ್ಲವನ್ನೂ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಲೆಹಾಕುತ್ದಿದ್ದು ಇತ್ತ ಬೆಳ್ಳಂ ಬೆಳಿಗ್ಗೆ ಬಸ್ ನಿಲ್ಲಾಣದಲ್ಲಿ ಈ ಒಂದು ಘಟನೆ ನೋಡಿದ ಸಾರ್ವಜನಿಕರಿಗೆ ಗಾಬರಿಗೊಂಡು ಎದ್ದೋ ಬಿದ್ದೋ ಎದ್ದುಕೊಂಡು ಭಯದಿಂದ ಓಡಾಡಿದ್ದು ಕಂಡು ಬಂದಿತು.