ಧಾರವಾಡ ದಲ್ಲಿ DC ಯವರ ಅಧ್ಯಕ್ಷತೆಯಲ್ಲಿ SC,ST ಸಮುದಾಯದವರ ಕುಂದು ಕೊರತೆಗಳ ಸಭೆ – ಮಹಾನಗರ ಪಾಲಿಕೆಯ ಆಯುಕ್ತರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತಿ…..

Suddi Sante Desk
ಧಾರವಾಡ ದಲ್ಲಿ DC ಯವರ ಅಧ್ಯಕ್ಷತೆಯಲ್ಲಿ SC,ST ಸಮುದಾಯದವರ ಕುಂದು ಕೊರತೆಗಳ ಸಭೆ – ಮಹಾನಗರ ಪಾಲಿಕೆಯ ಆಯುಕ್ತರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತಿ…..

ಧಾರವಾಡ

ಧಾರವಾಡ ದಲ್ಲಿ DC ಯವರ ಅಧ್ಯಕ್ಷತೆಯಲ್ಲಿ SC,ST ಸಮುದಾಯದವರ ಕುಂದು ಕೊರತೆಗಳ ಸಭೆ – ಮಹಾನಗರ ಪಾಲಿಕೆಯ ಆಯುಕ್ತರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತಿ….. ಹೌದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದು ಕೊರತೆ ಗಳ ಸಭೆ ಜರುಗಿತು.

ಸಭೆಯಲ್ಲಿ ಸಮುದಾಯದ ವ್ಯಕ್ತಿಗಳ ವೈಯಕ್ತಿಕ ಸಮಸ್ಯೆಗಳನ್ನು, ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಪ್ರತಿ ಕುಂದುಕೊರತೆಗಳನ್ನು ಸೂಕ್ತವಾಗಿ ಸ್ಪಂದಿಸಿ, ಪರಿಹರಿಸಬೇಕು. ಸರಕಾ ರದ ಹಂತದಲ್ಲಿ ಕ್ರಮ ಅಗತ್ಯವಿದ್ದರೆ  ವರದಿ ಯೊಂದಿಗೆ ಶಿಪಾರಸ್ಸು ಮಾಡುವಂತೆ ನಿರ್ದೇಶಿ ಸಿದರು.

ಎಲ್ಲಾ ತಹಸಿಲ್ದಾರರು ಪ್ರತಿ ಮೂರು ತಿಂಗಳಿ ಗೊಮ್ಮೆ ತಪ್ಪದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯದವರ ಕುಂದುಕೊರ ತೆಗಳ ಸಭೆಯನ್ನು ತಾಲೂಕು ಮಟ್ಟದಲ್ಲಿ ಜರುಗಿ ಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ,ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ಧನಗೌಡರ ಇದ್ದರು.ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾ ಭಕಾಷ ಎಂ.ಎಸ್. ಅವರು ಸ್ವಾಗತಿಸಿ ಸಭೆ ನಿರ್ವಹಿಸಿದರು.

ಹುಬ್ಬಳಿಯ ರಾಜಗೋಪಾಲ ನಗರದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕ, ಕುಡಿ  ಯುವ ನೀರು ವ್ಯವಸ್ಥೆ ಮತ್ತು ಸಂಸ್ಥೆಯ ಹೆಸರು ತಿದ್ದುಪಡಿ ಕುರಿತು ಶಿವಶಂಕರ ಭಂಡಾರಿ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ತಕ್ಷಣ ಕ್ರಮವಹಿಸಲು ಶಾಲಾಶಿಕ್ಷಣ ಇಲಾಖೆ ಉಪನಿ ರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಮನ್ವಯ ಸಾಧಿಸಲು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ,ಮಹಾನಗರ ವ್ಯಾಪ್ತಿಯಲ್ಲಿ ವಿವಿಧ ನಗರಗಳಲ್ಲಿ ಆಶ್ರಯ ಹಾಗೂ ವಿವಿಧ ವಸತಿ ಯೋಜನೆ ಮನೆಗಳ ಕುರಿತು ಈಗಾಗಲೇ ಅಧಿಕಾರಿಗಳ ನೇತೃತ್ವದಲ್ಲಿ ಸಮೀಕ್ಷೆ ಮಾಡಲಾಗಿದ್ದು,

ಬಾಡಿಗೆದಾರರು, ಮಾಲೀಕರು, ಬೀಗ ಹಾಕಿದ ಮನೆಗಳು ಮತ್ತು ಮಾರಾಟ ಮಾಡಿದ ಮನೆಗಳ ಕುರಿತು ಸಮೀಕ್ಷಾ ವರದಿ ತಯಾರಿಸಿ, ಜಿಲ್ಲಾಡಳಿ ತಕ್ಕೆ ಹಾಗೂ ಸಚಿವರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ವಿವಿಧ ಕುಂದುಕೊರತೆಗಳ ಕುರಿತು ದಾನಪ್ಪ ಕಬ್ಬೇರ, ಮೋಹನ ಹಿರೇಮನಿ, ಆನಂದ ಅದ್ವಾನಿ, ಅಶೋಕ ದೊಡಮನಿ, ಲಕ್ಷ್ಮಣ ದೊಡಮನಿ, ಚಿಕ್ಕತುಂಬಳ, ಲಕ್ಷ್ಮಣ ಬಕ್ಕಾಯಿ, ಕಲ್ಮೇಶ ಹಾದಿಮನಿ, ಗುರುನಾಥ ಉಳ್ಳಿಕಾಶಿ,ತಿಪ್ಪಣ್ಣ ತಳವಾರ, ಸೇರಿದಂತೆ ವಿವಿಧ ಮುಖಂಡರು ಮಾತನಾಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲೆಯ ಕಲಘಟಗಿ, ನವಲಗುಂದ,ಅಣ್ಣಿಗೇರಿ, ಕುಂದಗೋಳ, ಹುಬ್ಬಳ್ಳಿ, ಅಳ್ನಾವರ, ಧಾರವಾಡ ತಾಲೂಕುಗಳ ವಿವಿಧ ಗ್ರಾಮಗಳ ಮತ್ತು ನಗರಗಳ ದಲಿತ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸಮುದಾಯದವರು ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.