ಕೊಪ್ಪಳ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಸಂಘಟನೆಯ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕು ಘಟಕ ದಿಂದಲೂ ಶಿಕ್ಷಕರು ಪ್ರತಿಭಟನೆ ಯನ್ನು ಮಾಡಿದರು ರಾಜ್ಯ ಸಂಘಟನೆಯ ನಿರ್ದೇಶನದಂತೆ ಶಿಕ್ಷಕರ ಸಿ & ಆರ್ ನಿಯಮ ತಿದ್ದುಪಡಿ ಹಾಗೂ ಮುಖ್ಯ ಗುರುಗಳ ಬಡ್ತಿ ಕುರಿತು ಕನಕಗಿರಿಯಲ್ಲಿ ತಹಶಿಲ್ದಾರರಿಗೆ ಮನವಿಯನ್ನು ನೀಡಲಾಯಿತು
ತಾಲೂಕು ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಶಿಕ್ಷಕರು ಸೇರಿ ಮನವಿಯನ್ನು ಸಲ್ಲಿಸಲಾಯಿತು ಮನವಿಯನ್ನು ಸ್ವೀಕರಿಸಿದ ವಿಶ್ವನಾಥ್ ಮುರುಡಿ ರವರು ನಿಮ್ಮ ಬೇಡಿಕೆ ನ್ಯಾಯಯುತವಾಗಿದ್ದು ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ತಾಲೂಕಿನ ಎಲ್ಲಾ ಶಿಕ್ಷಕರುಂಧದವರಿಗೆ ಹಾಗೂ ಆರಕ್ಷಕರ ಠಾಣೆಯ ಸಿಬ್ಬಂದಿ ವರ್ಗದವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು ಈ ಒಂದು ಸಮಯದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಸರ್ವ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಕನಕಗಿರಿ…..