ಕೊಪ್ಪಳ DYSP ಯಾಗಿ ಅಧಿಕಾರ ವಹಿಸಿಕೊಂಡ ಮುತ್ತಣ್ಣ ಸವರಗೋಳ – ನೂತನ ಡಿವೈಎಸ್ಪಿ ಯವರನ್ನು ಬರಮಾಡಿಕೊಂಡ ಪೊಲೀಸ್ ಸಿಬ್ಬಂದಿಗಳು,ಅಧಿಕಾರಿಗಳು ಹೌದು
ಕೊಪ್ಪಳ ಜಿಲ್ಲೆಯ ನೂತನ ಡಿವೈಎಸ್ಪಿ ಯಾಗಿ ಮತ್ತಣ್ಣ ಸರವಗೋಳ ಅಧಿಕಾರವನ್ನು ವಹಿಸಿ ಕೊಂಡಿದ್ದಾರೆ.ಹೌದು ಹುಬ್ಬಳ್ಳಿಯಿಂದ ವರ್ಗಾ ವಣೆಗೊಂಡ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯ ಉಪ ವಿಭಾಗದ ಡಿವೈಎಸ್ಪಿ ಯಾಗಿ ಅಧಿಕಾರವನ್ನು ವಹಿಸಿಕೊಂಡರು.
ಕಚೇರಿಗೆ ಆಗಮಿಸುತ್ತಿದ್ದಂತೆ ಸಿಬ್ಬಂದಿಗಳು ಮತ್ತು ಉಪವಿಭಾಗದ ಪೊಲೀಸ್ ಅಧಿಕಾರಿಗಳು ನೂತನ ಡಿವೈಎಸ್ಪಿ ಯವರನ್ನು ಬರಮಾಡಿಕೊಂ ಡರು.ಇಧೇ ವೇಳೆ ಸ್ವಾಗತಿಸಿ ಶುಭವನ್ನು ಕೋರಿ ದರು.ಅಧಿಕಾರವನ್ನು ವಹಿಸಿಕೊಂಡ ನಂತರ
ಕೊಪ್ಪಳ ಉಪವಿಭಾಗದ ವ್ಯಾಪ್ತಿಯಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಸಾಂಕೇತಿಕ ವಾದ ಸಭೆಯನ್ನು ಮಾಡಿದರು.ನಂತರ ನೇರ ವಾಗಿ ನಗರದಲ್ಲಿನ ಐತಿಹಾಸಿಕ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದವನ್ನುಪಡೆದುಕೊಂಡು ಕರ್ತವ್ಯಕ್ಕೆ ಮರಳಿದರು.
ಕೊಪ್ಪಳ ಜಿಲ್ಲೆಯ ಉಪ ವಿಭಾಗದಲ್ಲಿ ಇನ್ನೂ ಮುಂದೆ ಮತ್ತಣ್ಣ ಸವರಗೋಳ ಅವರ ಅಧಿಕಾರ ಆರಂಭವಾಗಲಿದ್ದು ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಇವರು ಈಗಾಗಲೇ ಇಲಾಖೆಯಲ್ಲಿ ಸಾಕಷ್ಟು ಒಳ್ಳೊಳ್ಳೇಯ ಕೆಲಸ ಕಾರ್ಯಗಳ ಮೂಲಕ ಹೆಸರನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..