ಕನಕಗಿರಿ –
ಮುಖ್ಯಶಿಕ್ಷಕ ಅಮಾನತು – ಮುಖ್ಯಶಿಕ್ಷಕ ಉಮೇಶ ಲಮಾಣಿಯವರನ್ನು ಅಮಾನತು ಮಾಡಿದ BEO ಹೌದು ಹಣವನ್ನು ದುರುಪ ಯೋಗ ಮಾಡಿಕೊಂಡಿರುವ ಆರೋಪದ ಮೇಲೆ ಮುಖ್ಯಶಿಕ್ಷಕರೊಬ್ಬರನ್ನು ಅಮಾನತು ಮಾಡಿ ರುವ ಘಟನೆ ಕನಕಗಿರಿಯಲ್ಲಿ ನಡಿದಿದೆ.ಕನಕಗಿರಿ ಸಮೀಪದ ಬೈಲಕ್ಕುಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ ಲಮಾಣಿ ಅವರೇ ಅಮಾನತು ಗೊಂಡವರಾಗಿ ದ್ದಾರೆ
ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬಿಡುಗಡೆಯಾಗಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಇಂದಿರಾ ನಗರ ಶಾಲೆ ಶಿಕ್ಷಕ ಉಮೇಶ ಲಮಾಣಿ ಅವರನ್ನು ಅಮಾನತುಗೊಳಿಸಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರು ಆದೇಶ ಹೊರಡಿಸಿದ್ದಾರೆ.ಶಾಲೆ ಅಕ್ಷರ ದಾಸೋಹ ಯೋಜನೆ ಖಾತೆಯ ಮೂಲಕ 81 ವಿದ್ಯಾರ್ಥಿ ಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ₹20,088 ಜಮಾವಣೆಮಾಡಲಾಗಿತ್ತು
ಅದರಲ್ಲಿ 10 ಮಕ್ಕಳಿಗೆ ಜಮಾವಣೆ ಮಾಡಿ ಉಳಿದ ಹಣವನ್ನು ನಗದು ರೂಪದಲ್ಲಿ ಈ ಹಿಂದೆ ಕೆಲಸ ಮಾಡಿದ ಶಾಲೆಗೆ ತೆರಳಿ ನಿಯಮಬಾಹಿರ ವಾಗಿ ವಿತರಿಸಲು ಮುಂದಾಗಿ ಆನಂತರ ಶಾಲೆ ಖಾತೆಗೆ ಜಮಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಬಿಸಿಯೂಟ ಪಾತ್ರೆ ಖರೀದಿಗೆ ಬಿಡುಗಡೆ ಯಾಗಿದ್ದ ₹ 10 ಸಾವಿರ ಅನುದಾನದಲ್ಲಿ ₹ 2,500 ಮೊತ್ತದ ಪಾತ್ರೆ ಖರೀದಿಸಿ, ಉಳಿದ ಹಣವನ್ನು ಬಳಸಿಕೊಂಡಿದ್ದರು
ನಂತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿ ದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸದೆ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಕನಕಗಿರಿ…..