ರಾಮದುರ್ಗ –
ಹೂ ಪುಸ್ತಕ ನೀಡಿ ಶಾಲೆಗೆ ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು ರಾಮದುರ್ಗ ತಾಲೂಕಿನಲ್ಲಿ ವಿಶೇಷವಾಗಿತ್ತು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಹೌದು ರಾಮದುರ್ಗ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಅಡಿಯಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯ ಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾ ಯಿತು
ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಚಕ್ಕಡಿ ಬಂಡಿ ಯಲ್ಲಿ ಕರೆ ತರಲಾಯಿತು. ಕುಂಭಮೇಳಗ ಳೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ಗುಲಾಬಿ ಹೂವು ನೀಡಿ ಸಿಹಿ ಹಂಚಿ ಮಕ್ಕಳನ್ನು ಸ್ವಾಗತಿಸಿದರು.
ತಾಲ್ಲೂಕಿನ ಹಲಗತ್ತಿ, ಗೊಣ್ಣಾಗರ, ಕೆ. ಚಂದರಗಿ ಗ್ರಾಮಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಉಪನಿರ್ದೇಶಕರ ಕಚೇರಿಯ ಡಿವೈಪಿಸಿ ಬಸವರಾಜ ಮಲಾನಟ್ಟಿ ಮಕ್ಕಳನ್ನು ಬರಮಾಡಿಕೊಂಡರು. ಶಾಲೆಯ ಹಾಜರಾತಿ ಯನ್ನು ನೂರಕ್ಕೆ ನೂರರಷ್ಟು ಉಳಿಸಿಕೊಳ್ಳುವ ಕುರಿತು ಪಾಲಕರ ಸಭೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ ಶೈಕ್ಷಣಿಕ ಬಲವರ್ಧನೆಯ ವರ್ಷ ವನ್ನಾಗಿ ಮಾಡಲು ಸಹಕರಿಸಲು ಮನವಿ ಮಾಡಿದರು.ಮಕ್ಕಳನ್ನು ದಾಖಲಿಸಿಕೊಂಡು ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಹಾಜರಾತಿ ಯೊಂದಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಕರಿಗೆ ಸೂಚನೆ ನೀಡಿದರು.
ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ ಸಿಆರ್‌ಪಿ ಬಿ.ಯು. ಬೈರಕದಾರ, ಬಿಆರ್‌ಪಿ ಐ.ಪಿ. ಮುಳ್ಳೂರು, ಎ.ಐ. ಅತ್ತಾರ, ಮುಖ್ಯ ಶಿಕ್ಷಕ ಬಿ.ವೈ. ಅಪ್ಪಾಜಿಗೌಡ್ರ, ಕೆ.ಎನ್. ಯಂಡ್ರಾವಿ, ಆಯಾ ಗ್ರಾಮಗಳ ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾ ರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು
ಸುದ್ದಿ ಸಂತೆ ನ್ಯೂಸ್ ರಾಮದುರ್ಗ…..