ವಿದ್ಯಾರ್ಥಿ ಗಳಿಗೆ ಗುಡ್ ನ್ಯೂಸ್ ನೀಡಿದ DSERT – ಕೋವಿಡ್ ಹಿನ್ನೆಲೆಯಲ್ಲಿ ಶೇ 20% ರಷ್ಟು ಪಠ್ಯ ಕಡಿತಗೊಳಿಸಿ ಆದೇಶ…..

Suddi Sante Desk

ಬೆಂಗಳೂರು –

ಕೋವಿಡ್ ಹಿನ್ನೆಲೆಯಲ್ಲಿ SSLC ವಿದ್ಯಾರ್ಥಿ ಗಳಿಗೆ DSERT ಸಂಸ್ಥೆ ಗುಡ್ ನ್ಯೂಸ್ ನೀಡಿದೆ.ಹೌದು 2021-22 ನೇ ಸಾಲಿನ SSLC ಯ ಶೇ 20 ರಷ್ಟು ಪಠ್ಯ ಕಡಿತಗೊಳಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.ವಿದ್ಯಾರ್ಥಿಗಳಿಗೆ 2021-22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸ ಬಾರದ ಪಠ್ಯಗಳ ಪಟ್ಟಿಯನ್ನು ಡಿಎಸ್ ಇಆರ್ ಟಿ ಬಿಡುಗಡೆ ಮಾಡಿದೆ.ಸರ್ಕಾರ ಈ ಹಿಂದೆ ಆದೇಶಿಸಿದ್ದಂತೆ ಶೇ. 20 ರಷ್ಟು ಪಠ್ಯ ಕಡಿಗೊಳಿಸಲಾಗಿದ್ದು ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾದ ಉಳಿದ ಶೇ.80 ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ.ಇನ್ನೂ ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ http://dsert.kar.nic.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಪಠ್ಯ ಕಡಿತ ಮಾಡಿರುವ ವಿವರ

ಕನ್ನಡ -8 ನೇ ಅಧ್ಯಾಯ ಸುಕುಮಾರ ಸ್ವಾಮಿ ಕತೆ ಹಾಗೂ ಕೆಮ್ಮನೆ ಮೀಸೆವೊತ್ತೋನೆ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ.ಇಂಗ್ಲಿಷ್– ಡಿಸ್ಕವರಿ, ಸೈನ್ಸ್ ಆಯಂಡ್ ಹೋಪ್ ಆಫ್ ಸರ್ವೈವಲ್, ದಿಬರ್ಡ್ ಆಫ್ ಹ್ಯಾಪಿನೆಸ್ ಪಾಠಗಳು ಹಾಗೂ ಬ್ಯಾಲೆಡ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್, ಟುಮಾರೋ ಮಾರ್ನಿಂಗ್ ಪದ್ಯಗ ಳನ್ನು ಕಡಿತಗೊಳಿಸಲಾಗಿದೆ.ವಿಜ್ಞಾನ- 3 ನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4 ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತಗಳು, 8 ನೇ ಅಧ್ಯಾಯ ಜೀವಿಗಳೂ ಹೇಗೆಸಂತಾನೋತ್ಪತ್ತಿ ನಡೆಸುತ್ತವೆ. ಮಾನವ ನ ಕಣ್ಣು ಮತ್ತು ವರ್ಣಮಯ ಜಗತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಪಾಠಗಳನ್ನು ಕಡಿತ ಗೊಳಿಸಲಾಗಿದೆ.- ದುನಿಯಾ ಮೆ ಪಹಲಾ ಮಕ್ಕಾನ್, ರೋಬೋಟ್ ಹಾಗೂ ಬಾಲ್-ಶಕಿತ್ ಪಠ್ಯ ಕಡಿತಗೊಳಿಸ ಲಾಗಿದೆ.

ಸಮಾಜ ವಿಜ್ಞಾನ – 10 ನೇ ಅಧ್ಯಾಯ 20 ನೇ ಶತಮಾ ನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ 5 ನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4 ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು ಎಂಬ ಪಾಠವನ್ನು ಕಡಿತಗೊಳಿಸಲಾಗಿದೆ.ಗಣಿತ – 8 ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9 ನೇ ಅಧ್ಯಾಯ ಬಹು ಪದೋಕ್ತಿಗಳು, 14 ನೇ ಅಧ್ಯಾಯ ಸಂಭವನೀಯತೆ ಪಾಠವನ್ನು ಕಡಿತಗೊಳಿ ಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.