ನವದೆಹಲಿ –
ಏಳನೇ ವೇತನ ಆಯೋಗದ ಜಾರಿ ಯಿಂದಾಗಿ ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನದಲ್ಲಿ ಹೆಚ್ಚಳವಾಗಲಿದೆ ಎಂಬ ವಿಚಾರ ಕುರಿತು ಈಗ ಸಾಕಷ್ಟು ಪ್ರಮಾಣದಲ್ಲಿ ಚರ್ಚೆ ನಡುವೆ ಎಷ್ಟು ಹೆಚ್ಚಳ ಎಂಬ ಮಾಹಿತಿ ಕುರಿತು ನೋಡೊದಾದರೆ
ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಆರನೇ ವೇತನ ಆಯೋಗಕ್ಕೆ ಹೋಲಿಸಿದರೆ ಶೇ.14.3ರಷ್ಟಾಗಿದೆ.
ಈ ಏರಿಕೆ ಆರನೇ ವೇತನ ಆಯೋಗದ (ಸಿಪಿಸಿ) ಹೆಚ್ಚಳಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಆರನೇ ವೇತನ ಆಯೋಗದಡಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಐದನೇ ವೇತನ ಆಯೋ ಗಕ್ಕೆ ಹೋಲಿಸಿದರೆ ಶೇ.54ರಷ್ಟಿತ್ತು.
ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಏಳನೇ ವೇತನ ಆಯೋಗದ ಪ್ರಯೋಜನಗಳ ಬಗ್ಗೆ ಲೋಕಸಭೆಯಲ್ಲಿ ಇತ್ತೀಚೆಗೆ ಲಿಖಿತ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿ ನೀಡಿದ್ದಾರೆ.
ಇನ್ನೂ ಐದನೇ ವೇತನ ಆಯೋಗದಡಿಯಲ್ಲಿ ಕನಿಷ್ಠ ವೇತನ ಹೆಚ್ಚಳ ಅದಕ್ಕಿಂತ ಹಿಂದಿನ ಸಿಪಿಸಿಗೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳ ವಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಹಾಗೆಯೇ 2014ರಿಂದ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಘೋಷಣೆ ಮಾಡಿರುವ ವಿವಿಧ ತೆರಿಗೆ ಪ್ರಯೋಜನ ಕ್ರಮಗಳ ಬಗ್ಗೆಯೂ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..