ಬೆಂಗಳೂರು –
ರಾಜ್ಯದ ಶಿಕ್ಷಕರಿಗೆ KSPSTA ಮಹತ್ವದ ಸಂದೇಶ – ನಾಡಿದ್ದು ಕೊನೆಯ ದಿನ ಈಗಲೇ ಈ ಕೆಲಸ ಮಾಡಿ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಕರೆ…..
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ವಿಚಾರ ಕುರಿತಂತೆ ಆಕ್ಷೇಪಣೆ ಸಲ್ಲಿಕೆ ಮಾಡಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದೆ. ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಯವರು ರಾಜ್ಯದ ಸಮಸ್ತ ಶಿಕ್ಷಕರ ಹಿತದೃಷ್ಟಿಯಿಂದ ಈ ಒಂದು ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 29 ರಂದು ಕೊನೆಯ ದಿನವಾಗಿದ್ದು ಈ ಒಂದು ಹಿನ್ನಲೆಯಲ್ಲಿ ಈ ಕೂಡಲೇ ಶಿಕ್ಷಕರು ಈ ಒಂದು ವಿಚಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಹೇಳಿದ್ದಾರೆ.ಈ ಕೂಡಲೇ ಶಿಕ್ಷಕರು ಆಕ್ಷೇಪಣಾ ಮಾದರಿ ಪತ್ರಗಳನ್ನು ತಗೆದುಕೊಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗೆ ಸಲ್ಲಿಸುವಂತೆ ರಾಜ್ಯಾಧ್ಯಕ್ಷರಾರಿಗಿರುವ ಚಂದ್ರಶೇಖರ ನುಗ್ಗಲಿ ಯವರು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……






















