ಬೆಂಗಳೂರು –
ರಾಜ್ಯ ಮಟ್ಟದ ಶಿಕ್ಷಕರ ಹೋರಾಟಕ್ಕೆ ರಾಜ್ಯದಲ್ಲಿ ಜೋರಾಗುತ್ತಿದೆ ಹೋರಾಟದ ಕಿಚ್ಚು – ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂಬಡ್ತಿ ವಿರುದ್ದ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ಶಿಕ್ಷಕರು ಬೆಂಗಳೂರು ಚಲೋ ಚಳುವಳಿಯ ಪತ್ರವನ್ನು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನೀಡಿದ KSPSTA ಟೀಮ್ ಹೌದು
ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿಂಬಡ್ತಿ ವಿರುದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕರೆ ನೀಡಿರುವ ರಾಜ್ಯ ಮಟ್ಟದ ಹೋರಾಟಕ್ಕೆ ರಾಜ್ಯದ ಶಿಕ್ಷಕರು ಸಿದ್ದರಾಗುತ್ತಿ ದ್ದಾರೆ ಆಗಸ್ಟ್ 12 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಹೋರಾಟವು ನಡೆಯಲಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ವಿಚಾರದಲ್ಲಿ ತಮಗೆ ಆಗಿರುವ ಅನ್ಯಾಯದ ವಿರುದ್ದ ಸೇನಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರು ಈ ಒಂದು ಹೋರಾಟಕ್ಕೆ ಕರೆಯನ್ನು ನೀಡಿದ್ದಾರೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಈ ಒಂದು ಹೋರಾಟಕ್ಕೆ ಕರೆ ನೀಡಿದ್ದು ಹೋರಾಟಕ್ಕೆ ಅನ್ಯಾಯಕ್ಕೊಳಗಾಗಿರುವ ಶಿಕ್ಷಕರು ಸಿದ್ದರಾಗುತ್ತಿ ದ್ದಾರೆ.ಈಗಾಗಲೇ ಪ್ರತಿಯೊಬ್ಬ ಶಿಕ್ಷಕರು ಈ ಒಂದು ಹೋರಾಟಕ್ಕೆ ಬೆಂಬಲವನ್ನು ಘೋಷಣೆ ಮಾಡಿದ್ದು ಆಗಸ್ಟ್ 12 ರಂದು ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ದರಾಗಿದ್ದು ಇದರ ನಡುವೆ ಇತ್ತ ಹೋರಾಟದ ಚಳುವಳಿಯ ಪತ್ರವನ್ನು ನೀಡಲಾಯಿತು
ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ನ ಟೀಮ್ ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಪತ್ರವನ್ನು ನೀಡಿದರು ಬೆಂಗಳೂರಿನಲ್ಲಿ ಭೇಟಿ ಯಾಗಿ ಬೆಂಗಳೂರು ಚಲೋ ಚಳುವಳಿಯ ಪತ್ರವನ್ನು ನೀಡಿ ಮಾಹಿತಿ ನೀಡಿದರು.
ಇತ್ತ ಶಿಕ್ಷಕರು ಈಗಾಗಲೇ ಸಂಘಟನೆ ಬಿಡುಗಡೆ ಮಾಡಿರುವ ಹೋರಾಟದ ಪೊಸ್ಟರ್ ನಲ್ಲಿ ತಮ್ಮದೇಯಾದ ಪೊಟೊ ವನ್ನು ಹಾಕಿಕೊಂಡು ಡಿಪಿ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಳ್ಳುತ್ತಾ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..