ಹರಿಹರ –
ಕಾಮಗಾರಿ ವೊಂದಕ್ಕೆ ಸಾಮಗ್ರಿಗಳನ್ನು ಪೊರೈಕೆ ಮಾಡಿದ ಬಿಲ್ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೌರಾಯುಕ್ತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹರಿಹರದಲ್ಲಿ ನಡೆದಿದೆ.ಹೌದು 25 ಲಕ್ಷ ಮೊತ್ತದ ಬಿಲ್ ದ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು
ಈ ಒಂದು ಕುರಿತು ಗುತ್ತಿಗೆದಾರ ಎಚ್.ಕರಿಬಸಪ್ಪ ದೂರು ನೀಡಿದ್ದರು ನೀರು ಸರಬರಾಜು ಕಾಮ ಗಾರಿಗೆ ಸಂಬಂಧಿಸಿದಂತೆ ಪೂರೈಸಿದ್ದ ಸಾಮಗ್ರಿ ಗಳ ಬಿಲ್ ಮೊತ್ತವನ್ನು ಮಂಜೂರು ಮಾಡಲು ಕಮಿಷನ್ ರೂಪದಲ್ಲಿ ಲಂಚ ಪಡೆಯುವಾಗ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಎಚ್.ಕರಿಬಸಪ್ಪ ಅವರು ಹರಿಹರ ನಗರಸಭೆಯ ವಾಟರ್ ಸಪ್ಲೈ ವಿಭಾಗಕ್ಕೆ ಅಂದಾಜು 25.30 ಲಕ್ಷ ರೂ. ಮೌಲ್ಯದ ಸಾಮಗ್ರಿ ಗಳನ್ನು ಸರಬರಾಜು ಮಾಡಿದ್ದು ಈ ಬಿಲ್ಲನ್ನು ಮಂಜೂರು ಮಾಡಲು ಪೌರಾಯುಕ್ತ ಐಗೂರು ಬಸವರಾಜ್ 2 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಎಚ್.ಕರಿಬಸಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಅದರಂತೆ ಮಧ್ಯಾಹ್ನ ಹರಿಹರೇಶ್ವರ ಬಡಾವಣೆಯ ತಮ್ಮ ನಿವಾಸದಲ್ಲಿ ಲಂಚ ಪಡೆಯುವಾಗ ಲೋಕಾ ಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಿದ್ದಾರೆ
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಇನ್ಸ್‌ಪೆಕ್ಟರ್‌ಗಳಾದ ಕಲಾವತಿ, ಎಚ್.ಎಸ್.ರಾಷ್ಟ್ರಪತಿ, ಪ್ರಭು ಬಿ.ಸೂರಿನ, ಮಧುಸೂದನ್ ಮತ್ತು ಸಿಬ್ಬಂದಿ ಸೇರಿದಂತೆ ಹಲವರು ಈ ಒಂದು ದಾಳಿಯಲ್ಲಿ ಇದ್ದರು.
ಸುದ್ದಿ ಸಂತೆ ನ್ಯೂಸ್ ಹರಿಹರ…..