ದಾವಣಗೆರೆ –
ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ ಕೈಗಾರಿಕಾ ಇಲಾಖೆ ಇಬ್ಬರು ಅಧಿಕಾರಿಗಳು ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿ ದ್ದಾರೆ.ದಾವಣಗೆರೆ ಕೈಗಾರಿಕಾ ಇಲಾಖೆ ಭೂಸ್ವಾ ಧೀನ ಅಧಿಕಾರಿ ಜಿಡಿ ಶೇಖರ್ ಮತ್ತು ಶಿರೆಸ್ತೆದಾರ ಶ್ರೀನಿವಾಸ್ ಇಬ್ಬರನ್ನು ಲೋಕಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಸರ್ಕಾರದ ಯೋಜನೆಗೆ ಕೋಳುರ ಬಳಿ ಗುಂಡಪ್ಪ ಎಂಬುವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾ ಗಿತ್ತು ಈ ಜಮೀನಿಗೆ ಪರಿಹಾರದ ಹಣ ನೀಡಲು 30 ಸಾವಿರ ಲಂಚ ಪಡೆಯುತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಯುಕ್ತರ ಕೈಗೆ ಸಿಕ್ಕಿಬಿದ್ದಿ ದ್ದಾರೆ.ಲೊಕಾಯುಕ್ತ ಎಸ್ಪಿ ಎಂ ಎಸ್ ಕೌಲಾಂಪುರೆ ಮಾರ್ಗದರ್ಶನದಲ್ಲಿ ಈ ಒಂದು ದಾಳಿ ನಡೆದಿದೆ
ಡಿವೈಸ್ಪಿ ರಾಮಕೃಷ್ಣ ಸಿಪಿಐ ಆಂಜನೇಯ ಸೇರಿ ಇತರ ಅಧಿಕಾರಿಗಳಿಂದ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಟ್ರ್ಯಾಪ್ ಮಾಡಲಾಗಿದೆ ಲಂಚ ಪಡೆಯುತ್ತಿದ್ದ ಜಿಡಿ ಶೇಖರ್ ಮತ್ತು ಶಿರೆಸ್ತೆ ದಾರ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ಲೊಕಾಯುಕ್ತ ಪೊಲೀಸರು ವಿಚಾರಣೆ ನಡೆ ಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..