ದಾವಣಗೆರೆ –
ಶಿಕ್ಷಕರ ಸಮಸ್ಯೆ ಕುರಿತಂತೆ DDPI ಗೆ ಮನವಿ ಸಲ್ಲಿಕೆ – ರಾಜ್ಯದ ಸಮಸ್ತ ಶಿಕ್ಷಕರ ಪ್ರಮುಖ ಬೇಡಿಕೆಗಳ ಕುರಿತಂತೆ ಧ್ವನಿ ಎತ್ತಿದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಹೌದು
ರಾಜ್ಯದ ಸಮಸ್ತ ಶಿಕ್ಷಕರ ಪ್ರಮುಖ ಬೇಡಿಕೆ ಯಾಗಿರುವ ಬಡ್ತಿ ವಿಚಾರ ಕುರಿತಂತೆ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘವು ಮತ್ತೊಮ್ಮೆ ಧ್ವನಿ ಎತ್ತಿದೆ.ಹೌದು ಈಗಾಗಲೇ ಸಾಕಷ್ಟು ಜನಪರ ಕೆಲಸ ಕಾರ್ಯಗಳೊಂದಿಗೆ ನಾಡಿನ ಶಿಕ್ಷಕರ ಧ್ವನಿಯಾಗಿ ಕೆಲಸಗಳನ್ನು ಮಾಡಿ ಕೊಂಡು ಬರುತ್ತಿರುವ ಈ ಒಂದು ಸಂಘಟನೆ ಸಧ್ಯ ಮತ್ತೊಂದು ಶಿಕ್ಷಕರ ಸಮಸ್ಯೆ ಕುರಿತಂತೆ ಧ್ವನಿ ಎತ್ತಿದೆ.
ಹೌದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದಾವಣಗೆರೆ ಜಿಲ್ಲಾ ಘಟಕ ದಾವಣಗೆರೆ ಉತ್ತರವಲಯ ಮತ್ತು ದಕ್ಷಿಣ ವಲಯ.ಮತ್ತು ಹೊನ್ನಾಳಿ ತಾಲೂಕು ಇತರೆ ತಾಲೂಕುಗಳ ಪದಾಧಿಕಾರಿಗಳ ನೇತ್ರತ್ವದಲ್ಲಿ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾ ಯಿತು.ಸಹಶಿಕ್ಷಕರರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ.ಮತ್ತು ಮುಖ್ಯ ಶಿಕ್ಷಕರ ಹುದ್ದೆಯಿಂದ ಪದವೀದರೇತರ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಪ್ರೌಢಶಾಲೆಗೆ ಬಡ್ತಿ ನೀಡುವ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು.
ಕೊಟ್ರೇಶ್ .ಜಿ.ಅವರಿಗೆ ಸಮಗ್ರ ಬೇಡಿಕೆಗಳ ಕುರಿತಂತೆ ಮನವಿಯನ್ನು ಸಲ್ಲಿಸಲಾಯಿತು. ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ತಿಂಗಳೊಳಗೆ ಬಡ್ತಿ ನೀಡಲು ಕೆಲವು ತೊಡಕುಗಳಿವೆ ಅವುಗಳನ್ನು ಸರಿಪಡಿಸಿ.ಬಡ್ತಿ ಪ್ರಕ್ರಿಯೆ ಶುರು ಮಾಡುವುದಾಗಿ ಭರವಸೆ ನೀಡಿ ದ್ದಾರೆ.
ಇನ್ನೂ ಈ ಒಂದು ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಇವರಿಗೆ ಸಂಘದ ಎಲ್ಲಾ ಪದಾಧಿಕಾ ರಿಗಳ ವತಿಯಿಂದ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಕೂಡಾ ಹೇಳಿದ್ದಾರೆ.ಈ ಒಂದು ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಸೇರಿದಂತೆ ಸರ್ವ ಪದಾಧಿಕಾರಿಗಳು ಉಪಸ್ಥಿತ ರಿದ್ದರು.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..