ದಾವಣಗೆರೆ –
ಬೊಲೊರೊ ಪಲ್ಟಿಯಾಗಿ ಮೂವರು ಸಾವಿಗೀಡಾದ ಘಟನ ದಾವಣಗೆರೆ ಯಲ್ಲಿ ನಡೆದಿದೆ.ಮಕರ ಸಂಕ್ರಮಣ ದಿನದಂದು ಈ ಒಂದು ಭೀಕರ ಅಪಘಾತ ಸಂಭವಿಸಿದ್ದು ಅಪಘಾತ ದಲ್ಲಿ ಮೂವರ ಸಾವಿಗೀಡಾಗಿದ್ದಾರೆ.
ನ್ಯಾಮತಿ ತಾಲ್ಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿಯಲ್ಲಿ ಈ ಒಂದು ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು ಮೂವರ ಸಾವಿಗೀಡಾಗಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ.
ಭದ್ರಾವತಿಯ ಚಂದನಕೆರೆ ಗ್ರಾಮದ ನಾಗರಾಜ್(38), ಮಂಜುನಾಥ್(45), ಗೌತಮ್(17) ಸಾವನ್ನಪ್ಪಿದ ದುರ್ದೈವಿಗಳಾ ಗಿದ್ದಾರೆ.ಅಡಿಕೆ ಕೋಯ್ಲು ಮುಗಿಸಿ ವಾಪಾಸ್ ಆಗುವಾಗ ಅಪಘಾತ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿ ಬೊಲೊರೊ ಪಲ್ಟಿಯಾಗಿದೆ
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..