ಧಾರವಾಡ –
ಸತತ ಮಳೆಯಿಂದಾಗಿ ತುಂಬಿದ ಧಾರವಾಡದ ಹಿರೇಕೆರೆಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಬೇಟಿ ನೀಡಿ ವೀಕ್ಷಣೆ ಮಾಡಿ ದರು

ಈ ಬಾರಿಯೂ ಸತತವಾಗಿ ಮಳೆಯಿಂದಾಗಿ ಧಾರವಾಡದ ನರೇಂದ್ರ ಗ್ರಾಮದಲ್ಲಿ ಹಿರೇಕೆರೆ ತುಂಬಿದೆ. ಮೈದುಂಬಿ ನಿಂತ ಕೆರೆಯನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ವೀಕ್ಷಣೆ ಮಾಡಿದರು.

ಇದೇ ವೇಳೆ ತುಂಬಿದ ಕೆರೆಗೆ ಶಾಸಕ ಅಮೃತ ದೇಸಾಯಿ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು
ತಹಶೀಲ್ದಾರ್ ಸಂತೋಷ ಬಿರಾದಾರ, ಕಂದಾಯ ನಿರೀಕ್ಷಕರು ಮಂಜುನಾಥ ಗೂಳಪ್ಪನವರ,ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಮೇದಾರ,ಪಿಡಿಒ ಮಲ್ಲಿ ಕಾರ್ಜುನ ಕೊಯಪ್ಪನರ,ಸೇರಿದಂತೆ ಗ್ರಾಮಸ್ಥರು ಮಹಿಳೆಯರೊಂದಿಗೆ ಸೇರಿಕೊಂಡು ಕೆರೆಗೆ ಬಾಗಿನು ಅರ್ಪಣೆ ಮಾಡಿದರು
ಈ ಒಂದು ಸಮಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಂಗವ್ವ ನಿರಂಜನ,ಉಪಾಧ್ಯಕ್ಷ ಆತ್ಮಾನಂದ ಹುಂಬೇರಿ,ಚೆನ್ನವೀರಗೌಡ ಪಾಟೀಲ, ಶಂಕರ ಕೋಮಾರ ದೇಸಾಯಿ,ಮಂಜುನಾಥ ಇಳಿಗೇರ,ನಾಗರಾಜ್ ಹಟ್ಟಿಹೋಳಿ,ರಾಯನಗೌಡ ಪಾಟೀಲ್, ಅಪ್ಪಣ್ಣ ಹಡಪದ, ಅರ್ಜುನಗೌಡ ಪಾಟೀಲ,ಬಸವರಾಜ ಪಮ್ಮನ್ನವರ,ಲಕ್ಷ್ಮೀ ಶಿಂಧೆ,ಮಲ್ಲವ್ವ ಪಾಟೀಲ್, ಈಶ್ವರ ತೊಟಗೇರ, ಸೇರಿದಂತೆ ಹಲವರು ಉಪಸ್ಥಿತರಿದ್ದರು

