ಬೆಂಗಳೂರು –
ಪಿಯುಸಿ ಪರೀಕ್ಷೆಯಲ್ಲೇ ಫೇಲ್ ರಾಜ್ಯದಲ್ಲಿ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಹೌದು ಓದಿನ ಪಾಠಕ್ಕಿಂತಲೂ ಬದುಕಿನ ಪಾಠ ದೊಡ್ಡದು.ಉಸಿರು ಇದ್ದರೆ ಓದು ಉಸಿರೇ ಇಲ್ಲದ ಮೇಲೆ ಯಾವ ಅಂಕ, ಪದವಿ, ಡಿಗ್ರಿ ಪ್ರಯೋಜನಕ್ಕೆ ಬರುತ್ತೆ ಇಂಥದ್ದೊಂದು ಸಣ್ಣ ಆಲೋಚನೆ ಮೂಡಿದ್ದರೆ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕು ಅಂತ್ಯವಾಗುತ್ತಿರಲಿಲ್ಲ

ಆದ್ರೆ ಓದಿನ ಪಾಠ ಕಲಿತಿದ್ದ ಅವರು ಬದುಕಿನ ಪಾಠವನ್ನೇ ಮರೆತಿದ್ದರು.ದ್ವಿತೀಯ ಪಿಯಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಜೊತೆಗೆ ನಪಾಸು ಆದ ಕಾರಣಕ್ಕೆ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಬದುಕನ್ನು ಅಂತ್ಯ ಗೊಳಿಸಿದ್ದಾರೆ.ಅದರಲ್ಲಿ ಆರು ವಿದ್ಯಾರ್ಥಿನಿಯರು ಇನ್ನೂಳಿದ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ
ಬೀದರ್ ನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು
ಬೀದರ್‌ನ ಚಿಟಗುಪ್ಪ ತಾಲೂಕಿನ ಮದ್ದರಗಿ ಗ್ರಾಮದ ಸುಹಾಲಿಸಿ ದಿಲೀಪ ಮರ್ಜಾಪುರೆ ಎಂಬ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಂಡ್ಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಬಲಿ
ಪಿಯುಸಿಯಲ್ಲಿ ಫೇಲಾದ ಕಾರಣಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿದ್ಯಾರ್ಥಿನಿ ನೇಣಿಗೆ ಶರಣಾ ಗಿದ್ದಾರೆ.ಇಲ್ಲಿನ ಮಹದೇವಪುರದ ಎಂ.ಜೆ.ಸ್ಪಂದನಾ ಆತ್ಮ ಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಬಾಗಲಕೋಟೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ
ಇನ್ನು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹಡಹಳ್ಳಿ ಗ್ರಾಮದ ಪೂಜಾ ರಾಚಪ್ಪ ಎಂಬ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಪಾಸು ಆದ ಕಾರಣಕ್ಕೆ ನೊಂದ ವಿದ್ಯಾ ರ್ಥಿನಿ ಈ ಕೆಟ್ಟ ತೀರ್ಮಾನ ತೆಗೆದುಕೊಂಡು ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾಳೆ.
ಪ್ರಥಮ ದರ್ಜೆಯಲ್ಲಿ ಪಾಸಾದ್ರೂ ಕೊಡಗಿ ನಲ್ಲಿ ಆತ್ಮಹತ್ಯೆ
ಕಡಿಮೆ ಅಂಕ ಬಂತು ಎಂಬ ಕಾರಣಕ್ಕೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಬಸವನಹಳ್ಳಿ ನಿವಾಸಿ ಸಂಧ್ಯಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೇರೂರು ನಿವಾಸಿ ನಿವೃತ್ತ ಯೋಧ ಸುಭಾಷ್ ಅವರ ಪುತ್ರಿಯಾಗಿರುವ ಸಂಧ್ಯಾ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದರು. ವಿಜ್ಞಾನ ವಿಭಾಗದಲ್ಲಿ 404 ಅಂಕ ಗಳಿಸಿದ್ದಳು. ಕಡಿಮೆ ಅಂಕ ಬಂತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರಣವ್ ಈಶ್ವರ ನಾಯ್ಕ್ ಜೀವ ಅಂತ್ಯ
ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾ. ಪಂ. ವ್ಯಾಪ್ತಿಯ ನಿವಾಸಿ ಪ್ರಣವ್ ಈಶ್ವರ ನಾಯಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಗದಗದಲ್ಲೂ ನೇಣಿಗೆ ಶರಣಾದ ಪವಿತ್ರಾ ಪ್ರಭುಗೌಡ
ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರ ಪ್ರಭುಗೌಡ ಲಿಂಗದಾಳ ಎಂಬ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಪಾಸು ಆಗಿದ್ದ ಪವಿತ್ರಾ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಬದುಕನ್ನೇ ಅಂತ್ಯಗೊಳಿಸಿ ದ್ದಾಳೆ.
ಗಣಿತದಲ್ಲಿ ಫೇಲಾಗಿದ್ದದ್ದಕ್ಕೆ ವಿಜಯನಗರದ ವಿದ್ಯಾರ್ಥಿ ಆತ್ಮಹತ್ಯೆ
ಗಣಿತದಲ್ಲಿ ನಪಾಸು ಆಗಿದ್ದ ವಿಜಯನಗರ ಇಲ್ಲೆ ಹೊಸ ಪೇಟೆ ತಾಲೂಕಿನ ಗರಗ ಗ್ರಾಮದ ಶ್ಯಾಮರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇಲ್ಲಿನ ಸಂಡೂರಿನ ಖಾಸಗಿ ಕಾಲೇಜಿ ನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದ ಎಲ್ಲಾ ವಿಷಯದಲ್ಲಿ ಪಾಸಾಗಿರುವ ಶ್ಯಾಮರಾಜ್ ಗಣಿತ ದಲ್ಲಿ ಫೇಲ್ ಆಗಿದ್ದ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈಲಿಗೆ ತಲೆಕೊಟ್ಟು ಬಳ್ಳಾರಿ ವಿದ್ಯಾರ್ಥಿ ಸಾವು
ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಪಾಸು ಆಗಿದ ಕಾರಣಕ್ಕೆ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಬಳ್ಳಾರಿ ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪವನ್ ಸಾಯಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಅಂತೂ ರಾಜ್ಯದಲ್ಲಿ ಫಲಿತಾಂಶ ಬಂದ ದಿನವೇ ಹತ್ತೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿ ಕೊಂಡಿದ್ದು ಇಡೀ ಶಿಕ್ಷಣ ರಂಗವನ್ನೇ ದಿಗ್ರ್ಬಾಂತಗೊಳಿಸಿದೆ. ಬದುಕಿಗಿಂತಲೂ ದೊಡ್ಡದು ಯಾವುದೂ ಅಲ್ಲ ಎಂಬ ಸತ್ಯವನ್ನು ಅರಿಯಮ ಮುಗ್ಧ ಮಕ್ಕಳು ಬದುಕನ್ನೇ ಅಂತ್ಯ ಮಾಡಿಕೊಂಡಿದ್ದಾರೆ.