ಹುಬ್ಬಳ್ಳಿ –
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು,ಘೋಷಣೆಗಳು ಹಾಗೂ ದೇಶ ವಿಭಜ. ನೆಯ ಹೇಳಿಕೆಗಳನ್ನು ಖಂಡಿಸಿ,ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ ಯುವ ಮೋರ್ಚಾದ ವತಿಯಿಂದ ಇಂದು “ರಾಷ್ಟ್ರ ಮೊದಲು ತಿರಂಗಾ ಯಾತ್ರೆ”ಜರುಗಿತು.
ಭಾರತ ಮಾತೆಗೆ ಜೈಕಾರದ ಘೋಷಣೆಗಳೊಂ ದಿಗೆ ಸರಾಫಗಟ್ಟಿ ವೃತ್ತದಿಂದ ವಿವಿಧ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ರಾಷ್ಟ್ರ ಮೊದಲು ತಿರಂಗಾ ಯಾತ್ರೆಯು ದಾಜೀಬಾನ ಪೇಟೆಯ ತುಳಜಾಭವಾನಿ ವೃತ್ತದಲ್ಲಿ ಸಂಪನ್ನಗೊಂಡಿತು.
ಯುವ ಘಟಕದ ಅಧ್ಯಕ್ಷ ಪ್ರೀತಮ್ ಅರಕೇರಿ ನೇತೃತ್ವದಲ್ಲಿ ಜರುಗಿದ ಯಾತ್ರೆಯಲ್ಲಿ ಜಿಲ್ಲಾ ಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ,ಪೂರ್ವ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ,ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಡಾ.ಮಲ್ಲಿಕಾ ರ್ಜುನ ಬಾಳಿಕಾಯಿ,ಪ್ರಮುಖರಾದ ನಾರಾಯಣ ಜರತಾರಘರ, ಶಿವು ಮೆಣಸಿನ ಕಾಯಿ,
ಚಂದ್ರಶೇಖರ ಗೋಕಾಕ ದತ್ತಮೂರ್ತಿ ಕುಲಕರ್ಣಿ,ಜಗದೀಶ ಬುಳ್ಳಾನವರ, ಸಂಗಮ ಹಂಜಿ, ಶಶಿಕಾಂತ ಬಿಜವಾಡ, ಬಸವರಾಜ ಅಮ್ಮಿನಭಾವಿ, ಅನುಪ ಬಿಜವಾಡ, ಮಂಜುನಾಥ ಕಲಾಲ, ಹರೀಶ ಹಳ್ಳಿಕೇರಿ, ವಿಶಾಲ ಜಾಧವ, ವಿಶ್ವನಾಥ ಛಬ್ಬಿ, ರಾಜು ಕೋರ್ಯಾಣಮಠ,ಅಣ್ಣಪ್ಪ ಗೋಕಾಕ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..