LIVE TV LocalCrimeNationalInternationalPoliticsEducationTechnologyEntertainmentSportsFeature
State News

ದನದ ಶೆಡ್‌ನಂತಿರುವ ಕಟ್ಟದಲ್ಲಿ 172 ಮಕ್ಕಳು 5 ವರ್ಷಗಳಿಂದ ಇದೇ ಸ್ಥಿತಿ‌ - ನರಕಯಾತನೆ ಶಾಲೆ.....

ಹಾಸನ

ಹೌದು ಇಂತಹ ದೊಂದು ಶಾಲೆ ಹಾಸನ ಜಿಲ್ಲೆಯಲ್ಲಿ ಇದೆ ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ 172 ಮಕ್ಕಳು ಕಳೆದ ಐದು ವರ್ಷಗಳಿಂದ ದನದ ಶೆಡ್‌ನಂತಿರುವ ಕಟ್ಟಡ ದಲ್ಲಿ ವಾಸಿಸುತ್ತಿರುವ ಆರೋಪ ಕೇಳಿಬಂದಿದೆ. ಆರರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿ ರುವ ಮಕ್ಕಳ ಪೈಕಿ 92 ಬಾಲಕರು ಹಾಗೂ 80 ಬಾಲಕಿಯರಿದ್ದಾರೆ.ಒಂದೇ ಸ್ಥಳದಲ್ಲಿ ಊಟ, ನಿದ್ರೆ ಹಾಗೂ ಪಾಠ ಕೇಳುವ ಪರಿಸ್ಥಿತಿ ಇದ್ದು, ಕೆಲ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತು ಪಾಠ ಕೇಳಬೇಕಾಗಿದೆ.

92 ಬಾಲಕರಿಗೆ ಕೇವಲ ಐದು ಶೌಚಾಲಯಗಳಿದ್ದು, ಬಾಲಕಿಯರಿಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಗಾಳಿ ಮತ್ತು ಬೆಳಕಿನ ಕೊರತೆಯಿರುವ ಕಟ್ಟಡದಲ್ಲೇ ಮಕ್ಕಳು ವಾಸಿಸುತ್ತಿದ್ದಾರೆ. ಮಕ್ಕಳ ವಾಸ್ತವ್ಯಕ್ಕಾಗಿ ತಿಂಗಳಿಗೆ 1.08 ಲಕ್ಷ ರೂ. ಬಾಡಿಗೆ ಪಾವತಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಪರ್ಯಾಯ ಜಾಗ ಸಿಗದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮುಂದುವರಿದಿದೆ ಎಂದು ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ.ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸದೆ ಇಂತಹ ಪರಿಸ್ಥಿತಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿರು ವುದಕ್ಕೆ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೂಡಲೇ ಮಕ್ಕಳನ್ನು ಸುರಕ್ಷಿತ ಹಾಗೂ ಸೂಕ್ತ ಸೌಲಭ್ಯವಿರುವ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾಸನ......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದನದ ಶೆಡ್‌ನಂತಿರುವ ಕಟ್ಟದಲ್ಲಿ 172 ಮಕ್ಕಳು 5 ವರ್ಷಗಳಿಂದ ಇದೇ ಸ್ಥಿತಿ‌ - ನರಕಯಾತನೆ ಶಾಲೆ.....ಶಿಕ್ಷಣ ಸಚಿವ ರಿಗೆ ಶಿಕ್ಷಕ ದಿನಾಚರಣೆ ಶುಭಾಶಯ ಕೋರಿದ KSPSTA - ಸಚಿವರನ್ನು ಭೇಟಿ ಮಾಡಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿನ ನಿಯೋಗ.....ಸರ್ಕಾರಿ ಶಾಲೆಗಳಿಗೆ ಪತ್ರಕರ್ತರು, ಯೂಟ್ಯೂಬರ್‌ಗಳ ಪ್ರವೇಶ ನಿರ್ಬಂಧ ಅರ್ಜಿ ವಿಚಾರಣೆಗೆ ನ್ಯಾಯಾಲಯ ನಕಾರ.....ಭೀಕರ ಅಪಘಾತ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಾಣಾಪಾಯದಿಂದ ಪಾರು - ಶಾಲೆಗೆ ಹೊರಟಿದ್ದ ಸಮಯದಲ್ಲಿ ಅಪಘಾತ..... ಮಾತೆ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ - ಪ್ರಶಸ್ತಿ ಗೌರವ ನಮ್ಮ ಸಂಘದ ಒಂದು ಹೆಮ್ಮೆಯ ವಿಚಾರವಾಗಿದೆ ಎಂದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾಗಿರುವ ಡಾ.ಲತಾ. ಎಸ್. ಮುಳ್ಳೂರು.....ಇಂದಿರಾದೇವಿ ಶಿಕ್ಷಣ ಸೇವೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಗೌರವ.....ಪೊಲೀಸ್ ಇಲಾಖೆಯ ಸೇವೆಗೆ ಯಶಸ್ವಿ 19 ವರ್ಷ 19 ವರ್ಷಗಳ ಸೇವಾ ಪಯಣದ ಸಂಭ್ರಮದಲ್ಲಿ ಒಂದೆಡೆ ಸೇರಿದ ಮಿತ್ರರು.....ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ - ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ....ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ.....ನವಲಗುಂದ ಕ್ಷೇತ್ರವನ್ನು ಬರಗಾಲ ಪೀಡಿತ ಘೋಷಣೆ - ಶಾಸಕ N H ಕೋನರೆಡ್ಡಿ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ.....ಕ್ಷೇತ್ರದ ಸಮಸ್ತ ರೈತರ ಪರವಾಗಿ CM ,DCM ಗೆ ಅಭಿನಂದನೆ ಸಲ್ಲಿಸಿದ ಜನಸೇವಕ.....ರಾಜ್ಯದ ಸಮಸ್ತ ಶಿಕ್ಷಕರ ಬಾಕಿ ವೇತನ ಕುರಿತು ಮಹತ್ವದ ಚರ್ಚೆ ಮಾಡಿದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....