LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಮಕ್ಕಳ ಪ್ರತಿಜ್ಞೆ..... ಶಿಕ್ಷಕರ ಎದುರು ಪ್ರತಿಜ್ಞೆ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....

ಚಾಮರಾಜನಗರ -

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು ಈ ದೀಪಾವಳಿ ಹಬ್ಬವನ್ನು ಪಟಾಕಿ ಹಚ್ಚದೆ ಆಚರಿಸಲು ಪ್ರತಿಜ್ಞೆ ಮಾಡಿದ್ದಾರೆ. ಮಾಲಿನ್ಯ ತಡೆದು, ಮಣ್ಣಿನ ಹಣತೆಗಳನ್ನು ಬೆಳಗುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಮಾದರಿ ಹೆಜ್ಜೆಯನ್ನು ಶಾಲಾ ಮಕ್ಕಳು ಇಟ್ಟಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ ಪಿ.ಇ. ಅವರ ನೇತೃತ್ವದಲ್ಲಿ ಮಕ್ಕಳು ಈ ಸಂಕಲ್ಪ ಮಾಡಿದ್ದಾರೆ. ಪಟಾಕಿಯಿಂದ ಉಂಟಾಗುವ ನೆಲ, ಜಲ, ಶಬ್ದ ಮತ್ತು ವಾಯು ಮಾಲಿನ್ಯದಿಂದ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತದೆ. ಅಲ್ಲದೆ, ಪಟಾಕಿ ಸಿಡಿಸುವಾಗ ಸಂಭವಿಸುವ ಅಪಘಾತಗ ಳಿಂದ ಮಕ್ಕಳು ಕಣ್ಣು ಕಳೆದುಕೊಳ್ಳುವ ಅಥವಾ ದೈಹಿಕ ಊನಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ.

ಈ ಎಲ್ಲಾ ಅಪಾಯಗಳನ್ನು ತಪ್ಪಿಸಲು ಪಟಾಕಿಗಳನ್ನು ತ್ಯಜಿಸಿ, ಹಣತೆಗಳನ್ನು ಬೆಳಗಿ ಹಬ್ಬವನ್ನು ಆಚರಿಸಲು ಮಕ್ಕಳು ನಿರ್ಧರಿಸಿದ್ದಾರೆ. ಪಟಾಕಿಗೆ ಖರ್ಚು ಮಾಡುವ ಹಣವನ್ನು ಗಿಡಗಳನ್ನು ನೆಡಲು ಅಥವಾ ಪುಸ್ತಕಗಳನ್ನು ಕೊಳ್ಳಲು ಬಳಸುವ ಮೂಲಕ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ಮಕ್ಕಳಿಗೆ ಪ್ರೋತ್ಸಾಹ ನೀಡಲಾಗಿದೆ. ಇದು ಸಂತೋಷ ಮತ್ತು ಸಂಭ್ರಮದ ಹಬ್ಬವಾಗಬೇಕೇ ಹೊರತು, ಅಪಾಯ ಮತ್ತು ಮಾಲಿನ್ಯದ ಮೂಲವಾಗಬಾರದು ಎಂದು ಶಿಕ್ಷಕರು ತಿಳಿಸಿದ್ದಾರೆ. ಇಡೀ ಸಮಾಜ ಪಟಾಕಿ ರಹಿತ ದೀಪಾವಳಿ ಆಚರಿಸಲು ಶಾಲಾ ಮಕ್ಕಳು ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಮಕ್ಕಳ ಪ್ರತಿಜ್ಞೆ..... ಶಿಕ್ಷಕರ ಎದುರು ಪ್ರತಿಜ್ಞೆ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ.....ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶ.....ಶಿಕ್ಷಕರಿಂದ ವಿರೋಧ.....ಬೈಕ್ ಡಿಕ್ಕಿ ಶಿಕ್ಷಕ ಶಿವಕುಮಾರ್ ಸಾವು.....IAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ನೀಡಿದ ಶಿಕ್ಷಣ ಇಲಾಖೆ......45 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಸಂಚು.....ಶಿಕ್ಷಣ ಸಂಘಟನೆಗಳು ಕಿಡಿ.....₹1 ಲಕ್ಷ ಸಂಬಳ ಕೊಟ್ರೂ 5 ದಿನ ಶಾಲೆಗೆ ಬರೊಲ್ಲ ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ.....ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಆದೇಶ‌‌‌‌.....ನವೆಂಬರ್ 18 ರಿಂದ ಶಾಲಾ-ಕಾಲೇಜು ಬಂದ್‌ಗೆ ಕರೆ.....ಬಂದ್ ಗೆ ಕರೆ ನೀಡಿದ ಹೋರಾಟ ಸಮನ್ವಯ ಸಮಿತಿ.....