LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ.....

ವಿಜಯನಗರ -

ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ ಹೌದು ಇಂತಹ ದೊಂದು ಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆತಾಂಡ ಸರ್ಕಾರಿ ಶಾಲೆಯ ನೆಚ್ಚಿನ ಶಿಕ್ಷಕಿ ಅನ್ನಪೂರ್ಣ ದೇವಿ ಅವರ ಸ್ವಯಂ ನಿವೃತ್ತಿ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಭಾವುಕ ಬೀಳ್ಕೊಡುಗೆ ಸಮಾರಂಭ ನಡೆದಿದೆ.

ಲೌಕಿಕ ಆಸ್ತಿಗಿಂತ ಅಂತರಂಗದ ನೆಮ್ಮದಿಯೇ ಶಾಶ್ವತವಾಗಿದ್ದು, ಕರ್ತವ್ಯ ಮುಗಿದ ತೃಪ್ತಿಯಲ್ಲಿ ಕುಟುಂಬ ಮತ್ತು ಅಧ್ಯಾತ್ಮಕ್ಕಾಗಿ ನಿವೃತ್ತಿಯ ಹೆಜ್ಜೆ ಇಡುತ್ತಿದ್ದೇನೆ ಎಂದು ಶಿಕ್ಷಕಿ ತಿಳಿಸಿದ್ದಾರೆ.ಅನ್ನಪೂರ್ಣ ದೇವಿ ಅವರ ನಿವೃತ್ತಿಯ ಸುದ್ದಿ ತಿಳಿಯುತ್ತಿದ್ದಂತೆಶಾಲಾ ಮಕ್ಕಳು ತಾಯಿಯಂತೆ ಪ್ರೀತಿಯಿಂದ ವಿದ್ಯಾದಾನ ಮಾಡಿದ ನೆಚ್ಚಿನ ಗುರುಗಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ.

ಶಿಕ್ಷಕ ವೃತ್ತಿ ಪರಮಾತ್ಮ ನೀಡಿದ ಪ್ರಸಾದವಿದ್ದಂತೆ ಎಂದಿರುವ ಅವರು, ಇಲಾಖೆಯ ಒತ್ತಡಗಳಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಕಳೆದ 23 ವರ್ಷಗಳ ಕಾಲ ಯಾವುದೇ ಕುಂದು ಬಾರದಂತೆ ಅತ್ಯಂತ ಪ್ರಾಮಾ ಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದಿದ್ದಾರೆ.

ಸುದ್ದಿ  ಸಂತೆ ನ್ಯೂಸ್ ವಿಜಯನಗರ......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಮಕ್ಕಳ ಪ್ರತಿಜ್ಞೆ..... ಶಿಕ್ಷಕರ ಎದುರು ಪ್ರತಿಜ್ಞೆ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ.....ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶ.....ಶಿಕ್ಷಕರಿಂದ ವಿರೋಧ.....ಬೈಕ್ ಡಿಕ್ಕಿ ಶಿಕ್ಷಕ ಶಿವಕುಮಾರ್ ಸಾವು.....IAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ನೀಡಿದ ಶಿಕ್ಷಣ ಇಲಾಖೆ......45 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಸಂಚು.....ಶಿಕ್ಷಣ ಸಂಘಟನೆಗಳು ಕಿಡಿ.....₹1 ಲಕ್ಷ ಸಂಬಳ ಕೊಟ್ರೂ 5 ದಿನ ಶಾಲೆಗೆ ಬರೊಲ್ಲ ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ.....ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಆದೇಶ‌‌‌‌.....ನವೆಂಬರ್ 18 ರಿಂದ ಶಾಲಾ-ಕಾಲೇಜು ಬಂದ್‌ಗೆ ಕರೆ.....ಬಂದ್ ಗೆ ಕರೆ ನೀಡಿದ ಹೋರಾಟ ಸಮನ್ವಯ ಸಮಿತಿ.....