LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶ.....ಶಿಕ್ಷಕರಿಂದ ವಿರೋಧ.....

ಬೆಂಗಳೂರು -

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಗುಣ ಮಟ್ಟದ ಶಿಕ್ಷಣದ ಕೊರತೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ನೀಡಿರುವ ಹೇಳಿಕೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಕೆಲ ಸರ್ಕಾರಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಅವರ ಮಾತುಗಳು ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣ ವಾಗಿವೆ

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಐಶ್ವರ್ಯ ವಾರದಲ್ಲಿ ಐದು ದಿನ ಶಾಲೆಗೇ ಬಾರದ ಶಿಕ್ಷಕರನ್ನು ತಾವು ನೋಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಶೌಚಾಲಯ, ಸ್ವಚ್ಛತೆ ಹಾಗೂ ಹೆಣ್ಣುಮಕ್ಕಳಿಗೆ ಅಗತ್ಯವಿರುವ ಪ್ಯಾಡ್ ಡಿಸ್‌ಬಿನ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆದಿದ್ದರು. ತಮ್ಮ ಸಂಸ್ಥೆಯ ವತಿಯಿಂದ ಪ್ರೊಜೆಕ್ಟರ್ ಹಾಗೂ ಬಸ್‌ಗಳನ್ನು ನೀಡಿರುವುದಾಗಿ ಅವರು ತಿಳಿಸಿದ್ದು, ಈ ಹೇಳಿಕೆಗಳ ವಿರುದ್ಧ ಶಿಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಮೂಹಿಕ ನಿಂದನೆಗೆ ವಿರೋಧ: ಕೆಲವರ ತಪ್ಪಿಗೆ ಲಕ್ಷಾಂತರ ಪ್ರಾಮಾಣಿಕ ಸರ್ಕಾರಿ ಶಿಕ್ಷಕರನ್ನು ಸಾರ್ವಜನಿಕವಾಗಿ ಹೀಯಾಳಿಸುವುದು ಸರಿಯಲ್ಲ ಎಂದು ಶಿಕ್ಷಕರು ಖಂಡಿಸಿದ್ದಾರೆ.ಅತಿಯಾದ ಕರ್ತವ್ಯ ದೊತ್ತಡ: ಬರಿ ದಾಖಲೆಗಳ ನಿರ್ವಹಣೆ, ಹಾಲು-ಮೊಟ್ಟೆ ಲೆಕ್ಕ ಹಾಗೂ ವಿವಿಧ ಕಾರ್ಯಾಗಾರಗಳ ಹೊರೆಯಿಂದಾಗಿ ತರಗತಿಯಲ್ಲಿ ಮುಕ್ತವಾಗಿ ಪಾಠ ಮಾಡಲು ಬಿಡುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ನಿಸ್ವಾರ್ಥ ಸೇವೆ: ವರ್ಷಪೂರ್ತಿ ರಜೆ ಹಾಕದೆ, ಅತ್ಯುತ್ತಮ ಫಲಿತಾಂಶ ನೀಡುತ್ತಿರುವ ನೂರಾರು ಶಿಕ್ಷಕರ ಮನಸ್ಸು ನೋಯಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ಕೈಬಿಡಬೇಕೆಂದು ನೆಟ್ಟಿಗರು ಆಗ್ರಹಿ ಸಿದ್ದಾರೆ.ಸಾರ್ವಜನಿಕವಾಗಿ ಸರ್ಕಾರಿ ಶಿಕ್ಷಕರ ದಕ್ಷತೆಯನ್ನು ಪ್ರಶ್ನಿಸುವ ಬದಲು, ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಶಿಕ್ಷಕರಿಗೆ ನೆಮ್ಮದಿಯಿಂದ ಬೋಧಿಸಲು ತಕ್ಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಮಕ್ಕಳ ಪ್ರತಿಜ್ಞೆ..... ಶಿಕ್ಷಕರ ಎದುರು ಪ್ರತಿಜ್ಞೆ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ಶಿಕ್ಷಕಿ ಅನ್ನಪೂರ್ಣ ದೇವಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ವಿದಾಯ.....ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶ.....ಶಿಕ್ಷಕರಿಂದ ವಿರೋಧ.....ಬೈಕ್ ಡಿಕ್ಕಿ ಶಿಕ್ಷಕ ಶಿವಕುಮಾರ್ ಸಾವು.....IAS ಅಧಿಕಾರಿಗಳ ವರ್ಗಾವಣೆ..... ಆಡಳಿತ ಯಂತ್ರಕ್ಕೆ ಸರ್ಜರಿ.....ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ನೀಡಿದ ಶಿಕ್ಷಣ ಇಲಾಖೆ......45 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಸಂಚು.....ಶಿಕ್ಷಣ ಸಂಘಟನೆಗಳು ಕಿಡಿ.....₹1 ಲಕ್ಷ ಸಂಬಳ ಕೊಟ್ರೂ 5 ದಿನ ಶಾಲೆಗೆ ಬರೊಲ್ಲ ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ.....ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಆದೇಶ‌‌‌‌.....ನವೆಂಬರ್ 18 ರಿಂದ ಶಾಲಾ-ಕಾಲೇಜು ಬಂದ್‌ಗೆ ಕರೆ.....ಬಂದ್ ಗೆ ಕರೆ ನೀಡಿದ ಹೋರಾಟ ಸಮನ್ವಯ ಸಮಿತಿ.....