ದೊಡ್ಡಬಳ್ಳಾಪುರ -
ಬೈಕ್ ವೊಂದು ಡಿಕ್ಕಿಯಾಗಿ ಶಿಕ್ಷಕ ರೊಬ್ಬರು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ದಲ್ಲಿ ನಡೆದಿದೆ ನಗರದಲ್ಲಿ ವಾಯುವಿಹಾರ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.ಬಸವೇಶ್ವರ ನಗರದ ನಿವಾಸಿ, ನೆಲಮಂಗಲ ತಾಲ್ಲೂಕಿನ ಸಿದ್ದಯ್ಯಪಾಳ್ಯ ಮೂಲದ ಶಿಕ್ಷಕ ಶಿವಕುಮಾರ್ (59) ಮೃತ ಶಿಕ್ಷಕ ರಾಗಿದ್ದಾರೆ
ದೇವನಹಳ್ಳಿ ತಾಲ್ಲೂಕಿನ ದೇವಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರದ ಬಸವೇಶ್ವರ ನಗರದಲ್ಲಿ ವಾಸಿಸುತ್ತಿದ್ದಾರೆ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ರಸ್ತೆ ದಾಟುವಾಗ ಪ್ರವಾಸಿ ಮಂದಿರ ವೃತ್ತದ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಶಿಕ್ಷಕ ಶಿವಕುಮಾರ್ ಮತ್ತು ಬೈಕ್ ಸವಾರ ಸಹ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಮೃತ ಶಿಕ್ಷಕ ಶಿವಕುಮಾರ್ ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಸ್ವಗ್ರಾಮ ಸಿದ್ದಯ್ಯಪಾಳ್ಯದಲ್ಲಿ ಅಂತ್ಯಕ್ರಿಯೆ ನಡೆಯಿತು. ದೊಡ್ಡ ಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ದೊಡ್ಡಬಳ್ಳಾಪುರ.....