ಕಲಬುರಗಿ -
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಬೆಳಿಗ್ಗೆ ಜೆಸ್ಕಾಂ ಎಇಇ ರಾಜೇಶ್ವರಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.ನಗರದ ಮಹಾಲಕ್ಷ್ಮಿ ಬಡಾವಣೆ, ಖಾದ್ರಿ ಚೌಕನಲ್ಲಿರುವ ಎರಡು ಮನೆಗಳು ಹಾಗೂ ಜೆಸ್ಕಾಂನ ಅವರ ಕಚೇರಿಯ ಮೇಲೂ ಅಧಿಕಾರಿ ಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಳಿಗ್ಗೆ ವಾಕಿಂಗ್ ಹೋಗಿದ್ದ ರಾಜೇಶ್ವರಿ ಅವರು ಮನೆಗೆ ಬರುವುದರೊಳಗೆ ಲೋಕಾಯುಕ್ತ ಅಧಿಕಾರಿ ಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ.....