ಬೆಂಗಳೂರು -
ಆಡಳಿತಾತ್ಮಕ ಕಾರಣಗಳ ಛಾಯೆಯಲ್ಲಿ ಸ್ಥಾಪಿತ ಕಾನೂನನ್ನು ತಪ್ಪುತಪ್ಪಾದ ವ್ಯಾಖ್ಯಾನದಡಿ ನಿರೂಪಿಸುವ ಕ್ರಮ ತರವಲ್ಲ' ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಕರ್ನಾಟಕ ಕಾನೂನು ವಿಶ್ವವಿದ್ಯಾಲ ಯದ ಪ್ರಾಧ್ಯಾಪಕರೊಬ್ಬರ ಹಳೇ ಪಿಂಚಣಿ ಯೋಜನೆ (ಒಪಿಎಸ್) ಪ್ರಯೋಜನ ಕೋರಿಕೆಗೆ ಅಸ್ತು ಎಂದಿದೆ.ʼಒಪಿಎಸ್ ಅಡಿಯಲ್ಲಿ ಪಿಂಚಣಿ ಮಂಜೂರು ಮಾಡುವಂತೆ ನಿರ್ದೇಶಿಸಿರುವ ಏಕ ಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಬೇಕು' ಎಂದು ಕೋರಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
'ಅರ್ಹ ವ್ಯಕ್ತಿಯೊಬ್ಬರಿಗೆ ದಕ್ಕಬೇಕಾದ ಕಾನೂನುಬದ್ಧ ಪಿಂಚಣಿಯನ್ನು ತಡಮಾಡದೆ ವಿತರಿಸಿ. ನೀವೇನೂ ಅವರಿಗೆ ಉಪಕಾರ ಮಾಡುತ್ತಿಲ್ಲ' ಎಂದು ಕುಟುಕಿದೆ: ಪ್ರತಿವಾದಿ ಚಿದಾನಂದ ರೆಡ್ಡಿ ಎಸ್.ಪಾಟೀಲ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1996 ರ ಮಾರ್ಚ್ 14ರಂದು ಉಪನ್ಯಾಸಕರಾಗಿ (ಲೆಕ್ಚರರ್) ನೇರ ನೇಮಕಾತಿಯಲ್ಲಿ ನೇಮಕಗೊಂಡು 2013ರ ಜುಲೈ 17ಕ್ಕೆ ಸಹವರ್ತಿ ಪ್ರಾಧ್ಯಾಪಕರಾಗಿ (ಅಸೋಸಿ ಯೇಟ್ ಪ್ರೊಫೆಸರ್) ಬಡ್ತಿ ಪಡೆದಿದ್ದರು.2013ರಲ್ಲಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾ ಲಯದ ಕಾನೂನು ಶಾಲೆಯ ಪ್ರಾಧ್ಯಾಪಕ (ಪ್ರೊಫೆಸರ್) ಆಗಿ ಆಯ್ಕೆಯಾದರು. ಹಾಗಾಗಿ, ಕರ್ನಾಟಕ ವಿವಿಯ ಹುದ್ದೆಗೆ; ಕರ್ನಾಟಕ ನಾಗರಿಕ ಸೇವಾ ನಿಯಮಗಳ (ಕೆಸಿಎಸ್) ನಿಯಮ 252(ಬಿ) ರ ಅಡಿಯಲ್ಲಿ ತಾಂತ್ರಿಕ ರಾಜೀನಾಮೆ ನೀಡಿ ಸೇವೆ ಯಿಂದ ತೆರವುಗೊಂಡರು.
2024ರ ಡಿಸೆಂಬರ್ 31ರವರೆಗೆ ಕಾನೂನು ವಿವಿಯಲ್ಲಿ ಸೇವೆ ಸಲ್ಲಿಸಿದ ಅವರು ವಯೋಸಹಜ ನಿವೃತ್ತಿ ಹೊಂದಿದರು. ಸರ್ಕಾರ ಆಡಳಿತಾತ್ಮಕ ಕಾರಣಗಳ ಮೂಲಕ 'ಪಾಟೀಲ್ ಅವರನ್ನು ಒಪಿಎಸ್ ವರ್ಗಕ್ಕೆ ಸೇರ್ಪಡೆ ಮಾಡಲು ಆಗುವುದಿಲ್ಲ' ಎಂದು ತಕರಾರು ತೆಗೆದಿತ್ತು. ನ್ಯಾ.ಎಂ.ನಾಗಪ್ರಸನ್ನತಾಂತ್ರಿಕ ರಾಜೀನಾಮೆ ಎರಡು ನೇಮಕಾತಿಗಳ ನಡುವಿನ ಸೇತುವೆಯಷ್ಟೇ ಹೊರತು ಮೊದಲು ಸಲ್ಲಿಸಿದ ಸೇವೆಯಿಂದ ಬರುವ ಪ್ರತಿಯೊಂದು ಪ್ರಯೋಜನವನ್ನು ಕಡಿತಗೊಳಿಸುವ ಉದ್ದೇಶದ ಮೃತ್ಯುದಂಡವಲ್ಲ.ಸಿ.ಎಸ್.ಪಾಟೀಲರ ಹದಿನೇಳು ವರ್ಷಗಳ ಹಿಂದಿನ ಸೇವೆಯನ್ನು; ಕೇವಲ ಅವರ ಸೇವಾ ವೃತ್ತಿಜೀವನದಲ್ಲಿನ ಐತಿಹಾಸಿಕ ಅಡಿ ಟಿಪ್ಪಣಿ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಒಂದು ವಿವಿಯಿಂದ ಮತ್ತೊಂದು ವಿವಿಗೆ ಸ್ಥಳಾಂತರ ಗೊಂಡದ್ದನ್ನು ಅವರ ಶೈಕ್ಷಣಿಕ ವೃತ್ತಿಜೀವನದ ಬಿರುಕು ಎಂದು ಪರಿಗಣಿಸಲು ಆಗದು. ಆ ಸೇವೆಯ ಕಾನೂನು ಪರಿಣಾಮಗಳನ್ನು ಆಡಳಿತ ನಿಯಮಗಳು ಮತ್ತು ಸಮಕಾಲೀನ ದಾಖಲೆಗಳ ಬೆಳಕಿನಲ್ಲಿ ನಿರ್ಧರಿಸಬೇಕಾಗುತ್ತದೆ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
'ಪಾಟೀಲ್ ಅವರಿಗೆ ಒಪಿಎಸ್ ಅಡಿಯಲ್ಲಿ ಸಲ್ಲಬೇಕಿ ರುವ ಎಲ್ಲಾ ಪಿಂಚಣಿ ಬಾಕಿಗಳನ್ನು ಎಂಟು ವಾರಗಳ ಒಳಗೆ ಅವರ ನಿವೃತ್ತಿ ದಿನಾಂಕದಿಂದ ಶೇ 6ರ ವಾರ್ಷಿಕ ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು. ಸೂಚಿತ ಅವಧಿಯಲ್ಲಿ ಈ ತೀರ್ಪನ್ನು ಪಾಲಿಸಲು ವಿಫಲವಾದರೆ ನೀಡಬೇಕಾದ ಮೊತ್ತಕ್ಕೆ ಶೇ 12ರ ವಾರ್ಷಿಕ ಬಡ್ಡಿ ದರದೊಂದಿಗೆ ₹1 ಲಕ್ಷ ಮೊಕದ್ದಮೆ ವೆಚ್ಚವನ್ನು ಭರಿಸಬೇಕಾಗುತ್ತದೆ' ಎಂದು ಎಚ್ಚರಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....