LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮತ್ತೋರ್ವ ಸರ್ಕಾರಿ ಅಧಿಕಾರಿ ಅಮಾನತು.....

ಮಂಡ್ಯ -

ನಾಗಮಂಗಲ ತಾಲ್ಲೂಕು ಕಚೇರಿಯ ಕಸದ ತೊಟ್ಟಿಯಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ಪ್ರಮುಖ ದಾಖಲೆಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನಾಗಮಂಗಲ ಅಭಿಲೇಖಾಲಯದ ಗ್ರೇಡ್-2 ತಹಶೀಲ್ದಾರ್ ಆಗಿದ್ದ ಉಪ ತಹಶೀಲ್ದಾರ್ ಎಂ. ಮಂಜುನಾಥ್ ಅವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಅವರು ಅಮಾನತು ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ದಾಖಲೆಗಳನ್ನು ಸಮರ್ಪ ಕವಾಗಿ ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ ಆರೋಪ ಮಂಜುನಾಥ್ ಅವರ ಮೇಲೆ ಕೇಳಿ ಬಂದಿದೆ.

ಕಳೆದ ಸೆಪ್ಟೆಂಬರ್ 15ರಂದು ನಾಗಮಂಗಲ ತಾಲ್ಲೂಕು ಕಚೇರಿ ಪಕ್ಕದ ಕಸದ ತೊಟ್ಟಿಯಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಹಲವು ಪ್ರಮುಖ ಕಡತಗಳು ಪತ್ತೆ ಯಾಗಿದ್ದವು. ಆರ್‌ಟಿಸಿ, ಎಂಆರ್, ಇಂಡೆಕ್ಸ್ ಸೇರಿ ದಂತೆ ಸಂರಕ್ಷಿಸಿ ಅಭಿಲೇಖಾಲಯದಲ್ಲಿ ಇಡಬೇಕಿದ್ದ ದಾಖಲೆಗಳನ್ನು ಕಸದ ತೊಟ್ಟಿಗೆ ಎಸೆಯಲಾಗಿತ್ತು. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಮೂಲ್ಯವಾದ ಭೂ ದಾಖಲೆಗಳನ್ನು ಕಸದ ತೊಟ್ಟಿಗೆ ಎಸೆದಿರುವುದರ ಹಿಂದೆ ನಿರ್ಲಕ್ಷ್ಯವಿದೆಯೇ ಅಥವಾ ಬೇರೆ ಉದ್ದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಕಂದಾಯ ಇಲಾಖೆಯಲ್ಲಿನ ಅಕ್ರಮ ಗಳು ಬಯಲಾಗುವ ಭೀತಿಯಿಂದ ದಾಖಲೆಗಳನ್ನು ಎಸೆಯಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಸಾರ್ವಜನಿಕರು ಆಗ್ರಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದ್ವಿತೀಯ ದರ್ಜೆ ಸಹಾಯಕ ಎಂ. ಅಶೋಕ್ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿ ಅಮಾನತುಗೊಳಿ ಸಿದ್ದರು.ಇದೀಗ ಉಪ ತಹಶೀಲ್ದಾರ್ ಎಂ. ಮಂಜುನಾಥ್ ಅವರನ್ನೂ ಅಮಾನತುಗೊಳಿಸುವ ಮೂಲಕ ಪ್ರಕರಣದಲ್ಲಿ ಮತ್ತೊಬ್ಬ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಂತಾಗಿದೆ.ಸಾರ್ವಜನಿಕವಾಗಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಮಂಜುನಾಥ್ ಅವರ ವಿರುದ್ಧವೂ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ರೈತರ ಜಮೀನಿನ ಮೂಲ ದಾಖಲೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಈಗ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೆ.....ಸಾರಿಗೆ ನೌಕರರಿಗೆ ಗುಡ್ ನ್ಯೂಸ್.....280 ಕೋಟಿ ರೂ ವೇತನ ಹಿಂಬಾಕಿ ಬಿಡುಗಡೆ.....ಮತ್ತೋರ್ವ ಸರ್ಕಾರಿ ಅಧಿಕಾರಿ ಅಮಾನತು.....ಆರಂಭಗೊಂಡ ಶಾಲಾ ಶಿಕ್ಷಕರ ಹೋರಾಟ.....ಬೆಂಬಲ ನೀಡಲು ಕರೆ.....ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ದಲ್ಲಿ ಗೆದ್ದ ಪ್ರಾಧ್ಯಾಪಕ.....OPS ನೀಡಲು ಆದೇಶ ಮಾಡಿದ ನ್ಯಾಯಾಲಯ.....ವಿಷ ಸೇವಸಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಮಹಿಳಾ ಅಧಿಕಾರಿ..... ಸಾವು ಗೆದ್ದ ಸರ್ಕಾರಿ ಶಾಲಾ ಶಿಕ್ಷಕ.....ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ..... ಸರ್ಕಾರಿ ಶಾಲಾ ಮುಖ್ಯಶಿಕ್ಷಕ ಅಮಾನತು.....