ಹೊನ್ನಾವರ -
ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ನ.17ರಂದು ಧಾರವಾಡದಲ್ಲಿ ನಡೆಯಲಿರುವ ಅನುದಾನಿತ ಶಾಲಾ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ' ಎಂದು ತಾಲ್ಲೂಕು ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ತಿಳಿಸಿದರು.ಈಚೆಗೆ ನಡೆದ ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಲ್.ಎಂ.ಹೆಗಡೆ ಮಾತನಾಡಿ, ನ.17ರಂದು ಪ್ರತಿಭಟನೆ ಜೊತೆಗೆ 18ರಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿ ಷ್ಟಾವಧಿ ಕಾಲ ಶಾಲೆಗಳ ಬಂದ್ ಗೆ ಕರೆ ನೀಡಲಾಗಿದೆ. ಜಿಲ್ಲೆಯ ಎಲ್ಲ ಆಡಳಿತ ಮಂಡಳಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು
ಒಕ್ಕೂಟದ ಪ್ರವರ್ತಕ ಕೃಷ್ಣಮೂರ್ತಿ ಹೆಬ್ಬಾರ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.ರಾಜೀವ ಶಾನಭಾಗ, ಯೋಗೇಶ ರಾಯ್ಕರ್, ಜೈವಂತ ಶೇಟ್, ಮಹೇಶ ಶೆಟ್ಟಿ, ಸೋಮೇಶ ಪೂಜಾರಿ, ಸಂತೋಷಕುಮಾರ ನಾಯ್ಕ, ಸಿ.ಆರ್. ಹೆಗಡೆ ಇದ್ದರು.
ಸುದ್ದಿ ಸಂತೆ ನ್ಯೂಸ್ ಹೊನ್ನಾವರ.....