LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....

ಶಿವಮೊಗ್ಗ -

ನಗರದ ಟಿಪ್ಪು ನಗರದ 6ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕಿ ರಾಫಿಯಾ ಗಜಾಲಿ ವಿರುದ್ಧ ಮಕ್ಕಳು ಮತ್ತು ಪೋಷಕರು ಗಂಭೀರ ದೂರು ನೀಡಿದ್ದಾರೆ. ಭವಿಷ್ಯ ರೂಪಿಸಬೇ ಕಾದ ಶಿಕ್ಷಕಿಯೇ ಬಡ ಮಕ್ಕಳ ಕುಟುಂಬದ ಕೆಲಸ ವನ್ನು ಹೀಯಾಳಿಸಿ ಅಸಭ್ಯ ಮಾತುಗಳನ್ನಾಡುತ್ತಿದ್ದಾರೆ ಎಂಬುದು ಆರೋಪ ಕೇಳಿಬಂದಿದೆ.ಪಾಠ ಮಾಡುವ ಬದಲು ಪಠ್ಯೇತರ ವಿಚಾರಗಳನ್ನು ಹೇಳಿ ಮಕ್ಕಳ ಮನಸ್ಸು ಕೆಡಿಸುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತರಗತಿಯಲ್ಲಿ ಮಕ್ಕಳನ್ನು ಕುರಿತು ಆಟೋ ಚಾಲಕರ ಮಕ್ಕಳು ಮುಂದೆ ಅದೇ ಕೆಲಸ ಮಾಡುತ್ತಾರೆ, ಗುಜರಿ ಮಾರುವವರ ಮಕ್ಕಳು ಅದೇ ಕೆಲಸ ಮಾಡುತ್ತಾರೆ, ಹೆಣ್ಣು ಮಕ್ಕಳು ಟೈಲ್ಸ್ ಕೆಲಸ ಮಾಡುವವರನ್ನು ಮದುವೆಯಾಗುತ್ತಾರೆ ಎಂದು ಶಿಕ್ಷಕಿ ಲೇವಡಿ ಮಾಡಿ ದ್ದಾರೆ ಎನ್ನಲಾಗಿದೆ.ಈ ನಡವಳಿಕೆಯಿಂದ ನೊಂದ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ ಶಿಕ್ಷಕಿಯನ್ನು ತಕ್ಷಣ ವರ್ಗಾವಣೆ ಮಾಡಿ ಕಠಿಣ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಿದ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಜಾತಿ, ಬಡತನ ಮತ್ತು ಕಲಿಕಾ ಸಾಮರ್ಥ್ಯವನ್ನು ಮುಂದಿಟ್ಟು ನಿಂದಿಸಿ ಥಳಿಸಿದ ಪ್ರಕರಣಗಳಲ್ಲಿ ಶಿಕ್ಷಣ ಇಲಾಖೆ ಅಮಾನತು ಮತ್ತು ಇಲಾಖಾ ತನಿಖೆಗೆ ಆದೇಶಿಸಿತ್ತು. ಬಡ ಮತ್ತು ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿರುವ ಸರ್ಕಾರಿ ಶಾಲೆಗಳಲ್ಲಿ ಇಂತಹ ದಬ್ಬಾಳಿಕೆ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ಹಾನಿ ಮಾಡುತ್ತದೆ. ಈ ಪ್ರಕರಣದಲ್ಲೂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೆ.....ಸಾರಿಗೆ ನೌಕರರಿಗೆ ಗುಡ್ ನ್ಯೂಸ್.....280 ಕೋಟಿ ರೂ ವೇತನ ಹಿಂಬಾಕಿ ಬಿಡುಗಡೆ.....ಮತ್ತೋರ್ವ ಸರ್ಕಾರಿ ಅಧಿಕಾರಿ ಅಮಾನತು.....ಆರಂಭಗೊಂಡ ಶಾಲಾ ಶಿಕ್ಷಕರ ಹೋರಾಟ.....ಬೆಂಬಲ ನೀಡಲು ಕರೆ.....ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ದಲ್ಲಿ ಗೆದ್ದ ಪ್ರಾಧ್ಯಾಪಕ.....OPS ನೀಡಲು ಆದೇಶ ಮಾಡಿದ ನ್ಯಾಯಾಲಯ.....ವಿಷ ಸೇವಸಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಮಹಿಳಾ ಅಧಿಕಾರಿ..... ಸಾವು ಗೆದ್ದ ಸರ್ಕಾರಿ ಶಾಲಾ ಶಿಕ್ಷಕ.....ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ..... ಸರ್ಕಾರಿ ಶಾಲಾ ಮುಖ್ಯಶಿಕ್ಷಕ ಅಮಾನತು.....