LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ.....

ಬೆಂಗಳೂರು -

ಬೆಳಗ್ಗೆ ಕಚೇರಿಗೆ ಹೊರಡುವಾಗ ಟ್ರಾಫಿಕ್ ಜಂಜಾಟ, ಪೆಟ್ರೋಲ್ ಖರ್ಚು, ರಸ್ತೆಯಲ್ಲಿ ವ್ಯರ್ಥವಾಗುವ ಸಮಯ ಇವು ಸರ್ಕಾರಿ ನೌಕರರ ದಿನನಿತ್ಯದ ಪ್ರಯಾಣದ ಸಮಸ್ಯೆಗಳಾಗಿವೆ. ಒಂದೇ ಮಾರ್ಗದಲ್ಲಿ, ಒಂದೇ ಕಚೇರಿಗೆ ತೆರಳುವವರು ಬೇರೆ ಬೇರೆ ಕಾರುಗಳಲ್ಲಿ ಪ್ರಯಾಣಿಸುವ ಬದಲು ಒಟ್ಟಿಗೆ ಹೋಗುವ ಅವಕಾಶ ಸಿಕ್ಕರೆ ಹೇಗಿರುತ್ತದೆ

ಇಂತಹ ಪ್ರಯಾಣದ ಕಿರಿಕಿರಿ ಕಡಿಮೆ ಮಾಡಲು ಸರ್ಕಾರಿ ನೌಕರರಿಗೆ ಹೊಸ ಕಾರ್ ಪೂಲಿಂಗ್ ಸೌಲಭ್ಯ ಪರಿಚಯಿಸಲು ಸರ್ಕಾರ ಮುಂದಾಗಿದೆ. 'ಕರ್ತವ್ಯ' ಆಯಪ್ ಮೂಲಕ ಸಹೋದ್ಯೋಗಿಗಳನ್ನು ಗುರುತಿಸಿ, ಪರಸ್ಪರ ಸಂಪರ್ಕ ಸಾಧಿಸಿ ಒಟ್ಟಿಗೆ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗುತ್ತಿದೆ.ಇನ್ನು ಮುಂದೆ ಸರ್ಕಾರಿ ನೌಕರರು ಪ್ರತಿದಿನ ಒಬ್ಬರೇ ಕಾರಿನಲ್ಲಿ ಕಚೇರಿಗೆ ತೆರಳುವ ಬದಲು ತಮ್ಮ ಮಾರ್ಗ ದಲ್ಲಿ ಪ್ರಯಾಣಿಸುವ ಸಹೋದ್ಯೋಗಿಗಳನ್ನು ಗುರುತಿಸಿ ಅವರೊಂದಿಗೆ ಒಟ್ಟಿಗೆ ಪ್ರಯಾಣಿಸಬ ಹುದು.

ಈ ಹೊಸ ಸೌಲಭ್ಯವನ್ನು 'ಕರ್ತವ್ಯ' ಆಯಪ್‌ನಲ್ಲಿ ಪರಿಚಯಿಸಲು ಯೋಜಿಸಲಾಗಿದೆ. ಸದ್ಯ ಸರ್ಕಾರಿ ನೌಕರರ ಹಾಜರಾತಿ ದಾಖಲಿಸಲು ಬಳಸಲಾಗುತ್ತಿ ರುವ ಈ ಆಯಪ್, ಮುಂದಿನ ದಿನಗಳಲ್ಲಿ ಸಹಭಾ ಗಿತ್ವದ ಪ್ರಯಾಣಕ್ಕೂ ನೆರವಾಗಲಿದೆ.ಈ ಹೊಸ ಸೌಲಭ್ಯದ ಮೂಲಕ ಸರ್ಕಾರಿ ನೌಕರರು ತಾವು ಕಚೇರಿಗೆ ತೆರಳುವ ಮಾರ್ಗದ ವಿವರಗಳನ್ನು ಕರ್ತವ್ಯ ಆಯಪ್‌ನಲ್ಲಿ ಅಪ್‌ಡೇಟ್ ಮಾಡಬಹುದು. ಅದೇ ಮಾರ್ಗದಲ್ಲಿ ಪ್ರಯಾಣಿಸಲು ಬಯಸುವ ಸಹೋ ದ್ಯೋಗಿಗಳು ಅವರನ್ನು ಗುರುತಿಸಿ ಒಟ್ಟಿಗೆ ಪ್ರಯಾಣಿ ಸಲು ವಿನಂತಿ ಕಳುಹಿಸಬಹುದು.

ಮಾರ್ಗದ ಮಾಹಿತಿ ಹಂಚಿಕೆ: ನೌಕರರು ತಾವು ಸಂಚರಿಸುವ ಮಾರ್ಗವನ್ನು ಆಯಪ್‌ನಲ್ಲಿ ದಾಖಲಿ ಸಬಹುದು.ಸಹೋದ್ಯೋಗಿಗಳೊಂದಿಗೆ ಸಂಪರ್ಕ: ಒಂದೇ ಮಾರ್ಗದಲ್ಲಿ ಪ್ರಯಾಣಿಸುವ ನೌಕರರನ್ನು ಗುರುತಿಸಿ, ಅವರೊಂದಿಗೆ ಕಾರ್ ಪೂಲಿಂಗ್‌ಗೆ ವಿನಂತಿಸಬಹುದು.ಪರಸ್ಪರ ಒಪ್ಪಿಗೆ ಪ್ರಯಾಣಕ್ಕೆ ಸಂಬಂಧಿಸಿದ ವಿನಂತಿಯನ್ನು ಇಬ್ಬರೂ ಒಪ್ಪಿಕೊಂಡ ಬಳಿಕವಷ್ಟೇ ಒಟ್ಟಿಗೆ ಪ್ರಯಾಣಿಸಲು ಅವಕಾಶ ವಿರುತ್ತದೆ.ಸುರಕ್ಷತೆಗೆ ಆದ್ಯತೆ: ಪ್ರಯಾಣಕ್ಕೂ ಮುನ್ನ ಪರಸ್ಪರರ ಹೆಸರು, ಇಲಾಖೆ ಹಾಗೂ ಹುದ್ದೆಯ ವಿವರಗಳನ್ನು ಪರಿಶೀಲಿಸಬಹುದು.

ಪ್ರತಿದಿನ ಒಂದೇ ರಸ್ತೆಯಲ್ಲಿ, ಒಂದೇ ಸಮಯದಲ್ಲಿ ಕಚೇರಿಗೆ ತೆರಳುವ ಅನೇಕ ಸರ್ಕಾರಿ ನೌಕರರಿರು ತ್ತಾರೆ. ಆದರೆ ಪರಸ್ಪರ ಪರಿಚಯ ಇಲ್ಲದ ಕಾರಣ ಅಥವಾ ನಂಬಿಕೆಯ ಕೊರತೆಯಿಂದ ಒಟ್ಟಿಗೆ ಪ್ರಯಾಣಿಸುವ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ಆಯಪ್‌ ನಲ್ಲಿ ಕಾರ್ ಪೂಲಿಂಗ್ ಆಯ್ಕೆಯನ್ನು ಅಭಿವೃದ್ಧಿಪ ಡಿಸಲಾಗುತ್ತಿದೆ.

ನೌಕರರು ತಮ್ಮ ಪ್ರಯಾಣದ ಮಾರ್ಗವನ್ನು ಆಯಪ್‌ ನಲ್ಲಿ ದಾಖಲಿಸಬಹುದು ಅದೇ ಮಾರ್ಗದಲ್ಲಿ ಪ್ರಯಾಣಿಸಲು ಬಯಸುವ ಸಹೋದ್ಯೋಗಿಗಳು ಅವರಿಗೆ ವಿನಂತಿ ಕಳುಹಿಸಬಹುದು. ಇದರಿಂದ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುವುದರ ಜೊತೆಗೆ ಇಂಧನ ವೆಚ್ಚ ಉಳಿಸಲು ಮತ್ತು ವಾಹನ ದಟ್ಟಣೆ ತಗ್ಗಿಸಲು ಸಹಾಯವಾಗಲಿದೆ.ಕಾರ್ ಪೋಲಿಂಗ್ ವ್ಯವಸ್ಥೆ ಜನರಲ್ಲಿ ಹೆಚ್ಚು ಜನಪ್ರಿಯ ವಾಗದಿರಲು ಪರಸ್ಪರ ನಂಬಿಕೆಯ ಕೊರತೆಯೇ ಪ್ರಮುಖ ಕಾರಣ. ಅಪರಿಚಿತರೊಂದಿಗೆ ಪ್ರಯಾಣಿ ಸಲು ಹಲವರು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ನೌಕರರ ನಡುವೆ ಈ ವ್ಯವಸ್ಥೆ ಜಾರಿಗೆ ತಂದರೆ, ಪ್ರಯಾಣಿಸುವವರು ಇಬ್ಬರೂ ಸರ್ಕಾರಿ ಸಿಬ್ಬಂದಿ ಎಂಬ ಮಾಹಿತಿ ಇರುವುದರಿಂದ ವಿಶ್ವಾಸ ಹೆಚ್ಚಬಹುದು ಎಂಬುದು ಇಲಾಖೆಯ ಆಶಯ.

ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಅವರ ಪ್ರಕಾರ, ಕಾರಿನಲ್ಲಿ ಪ್ರಯಾಣಿ ಸುವವರ ಬಗ್ಗೆ ಮಾಹಿತಿ ತಿಳಿದಿರುವುದರಿಂದ ಸರ್ಕಾರಿ ನೌಕರರ ನಡುವೆ ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಸುಲಭವಾಗಿ ಜಾರಿಗೆ ತರಬಹುದು.

ಪ್ರಯಾಣಕ್ಕೆ ಒಪ್ಪಿಗೆ ನೀಡುವ ಮೊದಲು ಇಬ್ಬರೂ ಪರಸ್ಪರರ ಹೆಸರು, ಇಲಾಖೆ ಮತ್ತು ಹುದ್ದೆಯ ವಿವರಗಳನ್ನು ನೋಡಬಹುದು. ಇಬ್ಬರ ಒಪ್ಪಿಗೆ ದೊರೆತ ಬಳಿಕವೇ ಒಟ್ಟಿಗೆ ಪ್ರಯಾಣ ಆರಂಭಿಸಲು ಅವಕಾಶವಿರಲಿದೆ ಎಂದು ಕರ್ತವ್ಯ ಯೋಜನೆಯ ಪ್ರಾಜೆಕ್ಟ್ ನಿರ್ದೇಶಕ ಶ್ರೀವ್ಯಾಸ ಎಚ್.ಎಂ. ತಿಳಿಸಿದ್ದಾರೆ

ಸರ್ಕಾರಿ ನೌಕರರ ಈ ಕಾರ್ ಪೂಲಿಂಗ್ ವ್ಯವಸ್ಥೆ ಯಶಸ್ವಿಯಾದರೆ, ಖಾಸಗಿ ಕಂಪನಿಗಳೂ ಇದನ್ನು ಅನುಸರಿಸುವ ಸಾಧ್ಯತೆ ಇದೆ. ಕೆಲವು ಕಂಪನಿಗಳಲ್ಲಿ ಈಗಾಗಲೇ ಇಂತಹ ವ್ಯವಸ್ಥೆಗಳಿದ್ದರೂ, ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಸರ್ಕಾರವೇ ಈ ಪ್ರಯತ್ನಕ್ಕೆ ಚಾಲನೆ ನೀಡಿದರೆ, ಇತರ ಸಂಸ್ಥೆಗಳೂ ತಮ್ಮ ಉದ್ಯೋಗಿಗಳಿಗೆ ಸಹಭಾಗಿತ್ವದ ಪ್ರಯಾಣವನ್ನು ಉತ್ತೇಜಿಸಬಹುದು ಎಂಬ ನಿರೀಕ್ಷೆಯಿದೆ.

ಕೇವಲ ವಾಹನ ದಟ್ಟಣೆ ಕಡಿಮೆ ಮಾಡುವುದಷ್ಟೇ ಅಲ್ಲ, ಸರ್ಕಾರಿ ನೌಕರರ ಆರೋಗ್ಯ ಮತ್ತು ದೈಹಿಕ ಚಟುವಟಿಕೆಗೂ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ. ಕರ್ತವ್ಯ ಆಯಪ್‌ನಲ್ಲಿ ಹೆಜ್ಜೆ ಎಣಿಸುವ ಆಯ್ಕೆಯನ್ನೂ ಸೇರಿಸಲು ಯೋಜಿಸಲಾಗಿದೆ.

ಕಚೇರಿಗೆ ಹೋಗುವಾಗ ಅಥವಾ ಮನೆಗೆ ಹಿಂದಿ ರುಗುವಾಗ ಸ್ವಲ್ಪ ದೂರ ನಡೆದುಕೊಂಡು ಹೋಗು ವುದು, ಬಸ್ ಅಥವಾ ಮೆಟ್ರೋ ಬಳಸುವುದರ ಜೊತೆಗೆ ನಡಿಗೆಯನ್ನು ರೂಢಿಸಿಕೊಳ್ಳುವುದು ಈ ಸೌಲಭ್ಯದ ಮೂಲಕ ಉತ್ತೇಜನ ಪಡೆಯಲಿದೆ. ಪ್ರತಿದಿನ ಹೆಚ್ಚು ನಡೆಯುವ ನೌಕರರನ್ನು ಗುರುತಿಸಿ ಗೌರವಿಸುವ ಯೋಜನೆಯೂ ಇದೆ. ಮುಂದಿನ ದಿನಗಳಲ್ಲಿ ಇಂತಹ ಉದ್ಯೋಗಿಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಕಾರ್ ಪೂಲಿಂಗ್ ಮತ್ತು ಹೆಜ್ಜೆ ಎಣಿಕೆ - ಈ ಎರಡೂ ಸೌಲಭ್ಯಗಳು ಸದ್ಯ ಅಭಿವೃದ್ಧಿ ಹಂತದಲ್ಲಿವೆ. ಮುಂದಿನ ಒಂದು ತಿಂಗಳೊಳಗೆ ಕರ್ತವ್ಯ ಆಯಪ್‌ನಲ್ಲಿ ಇವು ಲಭ್ಯವಾಗುವ ನಿರೀಕ್ಷೆಯಿದೆ. ಈ ಯೋಜನೆ ಜಾರಿಗೆ ಬಂದರೆ ಸರ್ಕಾರಿ ನೌಕರರ ಪ್ರಯಾಣದ ವೆಚ್ಚ ಕಡಿಮೆಯಾಗುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ದೊರೆಯುವ ಸಾಧ್ಯತೆಯಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ.....ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ.....ಇಲ್ಲದ ಅಂಗನವಾಡಿ ಕೇಂದ್ರ ಗಳ ಹೆಸರಿನಲ್ಲಿ ಲಕ್ಷ ಲಕ್ಷ ರೂಪಾಯಿ ಗುಳಂ.....ವರದಿಯಲ್ಲಿ ಬೆಳಕಿಗೆ ಬಂದ ವಂಚನೆ.....ಶಾಲೆಯ ಪ್ರಿನ್ಸಿಪಾಲ್, ವಾರ್ಡನ್ ಸಸ್ಪೆಂಡ್.....ಸರ್ಕಾರದ ದಿಟ್ಟ ನಿರ್ಧಾರ.....ಮುಖ್ಯ ಶಿಕ್ಷಕ,ಅಕ್ಷರದಾಸೋಹ ಅಧಿಕಾರಿ ಅಮಾನತು.....ರಾಜ್ಯದ ಸರ್ಕಾರಿ ಶಿಕ್ಷಕರಿಗೆ ಸಿಹಿಸುದ್ದಿ.....ವರ್ಗಾವಣೆ ನಿಯಮ ಮತ್ತಷ್ಟು ಸರಳ.....ರಾಜ್ಯದ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಚುನಾವಣಾ ಆಯೋಗ.....ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ.....2027 ರ ಶಾಲೆಗಳ ರಜಾ ದಿನಗಳ ಪಟ್ಟಿ ಬಿಡುಗಡೆ.....2027 ರ ಸರ್ಕಾರಿ ಶಾಲೆಗಳ ರಜೆಗಳ ಸಂಪೂರ್ಣ ಮಾಹಿತಿ.....ಮುಖ್ಯಶಿಕ್ಷಕ ಸೇರಿ ಇಬ್ಬರ ಅಮಾನತು.....