ಬೆಂಗಳೂರು -
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಪಾರದರ್ಶಕ ಹಾಗೂ ಶಿಕ್ಷಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕೆ ಪೂರಕವಾಗಿ 'ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026' ಎಂಬ ಹೊಸ ನಿಯಮಗಳ ಕರಡು ಅಧಿಸೂಚನೆ ಯನ್ನು ಸರ್ಕಾರ ಪ್ರಕಟಿಸಿದೆ.
ಹೆಚ್ಚುವರಿ, ವಲಯ ಮತ್ತು ಬಡ್ತಿ ವರ್ಗಾವಣೆಗೊಂಡ ವರಿಗೆ ಬ್ಲಾಕ್ ಮಿತಿಯಿಂದ ವಿನಾಯಿತಿ ಹೊಸ ಕರಡು ನಿಯಮಗಳ ಅನ್ವಯ, ಈ ಹಿಂದೆ ಸಮರ್ಪಕ ಮರು ಹೊಂದಾಣಿಕೆಯ ಹೆಚ್ಚುವರಿ ಪ್ರಕ್ರಿಯೆಯಲ್ಲಿ, ವಲಯ ವರ್ಗಾವಣೆ ಅಥವಾ ಬಡ್ತಿಯ ಮೇರೆಗೆ ವರ್ಗಾವಣೆ ಗೊಂಡು,ಅದರಿಂದಾಗಿ ಅದೇ ಜಿಲ್ಲೆಯೊಳಗೆ ತಮ್ಮ ಕಾರ್ಯನಿರತ ಶೈಕ್ಷಣಿಕ ಬ್ಲಾಕ್ (ತಾಲ್ಲೂಕು) ಬದಲಾವ ಣೆಯಾಗಿದ್ದ ಶಿಕ್ಷಕರಿಗೆ ವಿಶೇಷ ರಿಯಾಯಿತಿ ನೀಡಲಾ ಗಿದೆ.
ಅಂತಹ ಶಿಕ್ಷಕರು ಮತ್ತೆ ವರ್ಗಾವಣೆ ಬಯಸಿದಲ್ಲಿ, ಬ್ಲಾಕ್ ಮಟ್ಟದ ಖಾಲಿ ಹುದ್ದೆಗಳ ಶೇಕಡಾವಾರು ಮಿತಿಯ ನಿಯಮವನ್ನು ಅನ್ವಯಿಸದೆಯೇ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜಿಲ್ಲೆಯೊಳಗೇ ಬೇರೆ ಬ್ಲಾಕ್‌ಗಳಿಗೆ ವರ್ಗಾವಣೆಗೊಂಡು ತೊಂದರೆ ಅನುಭವಿಸುತ್ತಿದ್ದ ಸಾವಿರಾರು ಶಿಕ್ಷಕರಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಂತಾಗಿದೆ.ಕರಡು ನಿಯಮಗಳಲ್ಲಿರುವ ಇತರ ಪ್ರಮುಖ ಅಂಶಗಳು:
ನಿರ್ಣಾಯಕ ಹುದ್ದೆಗಳಿಗೆ ಮೊದಲ ಆದ್ಯತೆ ಕರ್ನಾಟಕ ಪಬ್ಲಿಕ್ ಶಾಲೆಗಳು (KPS), ಆದರ್ಶ ವಿದ್ಯಾಲಯಗಳು, ಪಿಎಂಶ್ರೀ ಶಾಲೆಗಳು ಹಾಗೂ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿನ ಹುದ್ದೆಗಳನ್ನು 'ನಿರ್ಣಾಯಕ ಹುದ್ದೆಗಳು' ಎಂದು ಗುರುತಿಸಲಾಗಿದೆ. ಶೈಕ್ಷಣಿಕ ಬ್ಲಾಕ್ ಮಟ್ಟದಲ್ಲಿ ಲಭ್ಯವಿರುವ ಎಲ್ಲಾ ನಿರ್ಣಾಯಕ ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಲು ಆದ್ಯತೆ ನೀಡಲಾಗಿದ್ದು, ಈ ಹುದ್ದೆಗಳಿಗೆ ವರ್ಗಾವಣೆಯಾಗುವವರಿಗೂ ಖಾಲಿ ಹುದ್ದೆಗಳ ಶೇಕಡಾವಾರು ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಈ ಹುದ್ದೆಗಳಿಗೆ ನಿಯೋಜನೆಗೊಂ ಡವರು ಕನಿಷ್ಠ 9 ವರ್ಷಗಳ ಕಾಲ ಸೇವೆ ಸಲ್ಲಿಸುವು ದನ್ನು ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ.
ವರ್ಗಾವಣೆ ಶೇಕಡಾವಾರು ಮಿತಿ ನಿಗದಿ ಸಾಮಾನ್ಯ ವರ್ಗಾವಣೆಯಲ್ಲಿ ಜಿಲ್ಲೆಯೊಳಗಿನ ವರ್ಗಾವಣೆಗೆ ಶೇ. 7, ವಲಯ ವರ್ಗಾವಣೆಗೆ ಶೇ. 4, ವಿಭಾಗದೊಳಗಿನ ವರ್ಗಾವಣೆಗೆ ಶೇ. 2 ಹಾಗೂ ವಿಭಾಗದಿಂದ ಹೊರಗಿನ ವರ್ಗಾವಣೆಗೆ ಶೇ. 2ರಷ್ಟು ಮಿತಿಯನ್ನು ನಿಗದಿಪಡಿಸಲು ಉದ್ದೇಶಿಸಲಾಗಿದೆ.
ಮಹಿಳಾ ಮತ್ತು ವಿಶೇಷ ಚೇತನ ಶಿಕ್ಷಕರಿಗೆ ರಿಯಾಯಿತಿ ಗರ್ಭಿಣಿ ಶಿಕ್ಷಕಿಯರು, 5 ವರ್ಷದೊ ಳಗಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿ ಯರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವರು ಹಾಗೂ ವಿಶೇಷ ಚೇತನ ಶಿಕ್ಷಕರಿಗೆ ವರ್ಗಾವಣೆ ಯಲ್ಲಿ ವಿಶೇಷ ಆದ್ಯತೆ ಮತ್ತು ವಿನಾಯಿತಿಗಳನ್ನು ನೀಡಲಾಗಿದೆ. ನಕಲಿ ವೈದ್ಯಕೀಯ ಪ್ರಮಾಣಪತ್ರಗಳಿಗೆ ಕಡಿವಾಣ ಹಾಕಲು ವಿಭಾಗ ಮಟ್ಟದ ಸಮಿತಿಯಿಂದ ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ನಿಯಮವನ್ನೂ ಸೇರಿಸಲಾಗಿದೆ.
ಡಯಟ್ ಮತ್ತು ಆಡಳಿತ ಹುದ್ದೆಗಳಿಗೆ ಸೇವಾನುಭವ ಕಡ್ಡಾಯ: ಡಯಟ್ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಕನಿಷ್ಠ 12 ವರ್ಷಗಳ ಸೇವಾನುಭವ ಕಡ್ಡಾಯಗೊಳಿಸಲಾಗಿದ್ದು, ಅಲ್ಲಿಗೆ ನಿಯೋಜನೆಗೊಂಡವರು ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದ ಬಳಿಕ ಕಡ್ಡಾಯ ವರ್ಗಾವಣೆಗೆ ಒಳಪಡಲಿದ್ದು ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ
ಪ್ರಸ್ತುತ ಪ್ರಕಟವಾಗಿರುವುದು ಕರಡು ಅಧಿಸೂಚನೆ ಯಾಗಿದ್ದು, ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಸಾರ್ವಜ ನಿಕರು, ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯ ದರ್ಶಿಗಳಿಗೆ ಸಲ್ಲಿಸಬಹುದಾಗಿದೆ ಅವುಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಅಂತಿಮ ಅಧಿಸೂಚ ನೆಯನ್ನು ಹೊರಡಿಸಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....