ಗಜೇಂದ್ರಗಡ -
ಸರ್ಕಾರಿ ಶಾಲೆಗಳ ಉಳಿವಿಗಾಗಿ ಪಟ್ಟಣದ ಬಾಲಕಿ ಯರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಎಫ್ಐ ನಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು ರಾಜ್ಯ ದಲ್ಲಿನ 2 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವುದು ಹಾಗೂ ಕೆಪಿಎಸ್ ಮ್ಯಾಗ್ನೇಟ್ ಶಾಲೆಗಳನ್ನಾಗಿ ಮಾಡುವುದನ್ನು ಎಸ್ಎಫ್ಐ ವಿರೋಧಿಸುತ್ತದೆ.ಸಮಾನ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಜನಾಂದೋ ಲನ ರೂಪಿಸುವ ಅಗತ್ಯವಿದೆ’ ಎಂದು ಸಂಘಟನೆ ಸದಸ್ಯರು ಆಗ್ರಹಿಸಿದರು.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆ, ಮೌಲಾನ್ ಆಜಾದ್ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಮಾಡಲಾಯಿತು. ಎಸ್ಎಫ್ಐನ ಗಣೇಶ ರಾಠೋಡ, ಚಂದ್ರು ರಾಠೋಡ, ಅನಿಲ ಆರ್., ಶರಣು ಮಾಟರಂಗಿ, ತನುಜಾ ರಾಯಬಾಗಿ, ರೇಣುಕಾ ಜೋಗಿನ, ಮುಖ್ಯ ಶಿಕ್ಷಕ ಬಸವರಾಜ ಕಡಬಿನ ಇದ್ದರು.
ಸುದ್ದಿ ಸಂತೆ ನ್ಯೂಸ್ ಗಜೇಂದ್ರಗಡ.....