LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....

ಕೇರಳ -

ಶಾಲೆಯ ಮುಂದೆ ಮಧ್ಯಪಾನ ಮಾಡಿ ವಿದ್ಯಾರ್ಥಿ ನಿಯರಿಗೆ ಕಿರುಕುಳ ಪ್ರಶ್ನಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ ಇಬ್ಬರ ಬಂಧನ ಹೌದು ಶಾಲೆಯ ಸಮೀಪ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಲ್ಲದೆ, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಇಬ್ಬರು ಆರೋಪಿಗಳನ್ನು ಕೇರಳದ ತಿರೂರ್ ಪೊಲೀಸರು ಬಂಧಿಸಿದ್ದಾರೆ.

​ಪರವಣ್ಣ ನಿವಾಸಿಗಳಾದ ಕುಟ್ಟಾತ್ ಮನೆಯ ಜಂಶೀರ್ (35) ಹಾಗೂ ಪರವಣ್ಣ ಪುತ್ತಂಗಾಡಿ ನಿವಾಸಿ ಚೆಕ್ಕಮ್ಮಾಡತ್ ರಿಯಾಸ್ (36) ಬಂಧಿತ ಆರೋಪಿಗಳು.ಪರವಣ್ಣ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ಬಳಿ ಈ ಘಟನೆ ನಡೆದಿತ್ತು. ಶಾಲೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಆರೋಪಿಗಳು ಮದ್ಯದ ಅಮಲಿನಲ್ಲಿ ವಿದ್ಯಾರ್ಥಿ ನಿಯರಿಗೆ ಕಿರುಕುಳ ನೀಡುತ್ತಿದ್ದರು ಇದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದಾಗ, ಕಾರಿನಿಂದ ಇಳಿದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಯ ಮೇಲಿನ ಹಲ್ಲೆಯನ್ನು ತಡೆಯಲು ಓಡಿಬಂದ ಇನ್ನಿಬ್ಬರು ವಿದ್ಯಾರ್ಥಿಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

​ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಶಿಕ್ಷಕಿಯೊಬ್ಬರು ವಿದ್ಯಾರ್ಥಿ ಗಳನ್ನು ರಕ್ಷಿಸಲು ಮುಂದಾಗಿ ಘಟನೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಶಿಕ್ಷಕಿಯ ಮೊಬೈಲ್ ಕಸಿದುಕೊಂಡು, ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಜಮಾಯಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

​ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ:
ಶಿಕ್ಷಕಿ ನೀಡಿದ ದೂರಿನ ಆಧಾರದ ಮೇಲೆ ತಿರೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆಯ ಬಳಿಕ ತಲೆಮರೆಸಿ ಕೊಂಡಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.ಈ ನಡುವೆ ಆರೋಪಿಗಳು ಇನ್ನೋವಾ ಕಾರಿನಲ್ಲಿ ಸಂಚರಿ ಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಿರೂರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಲೀಲ್ ಕರುತ್ತೇಡತ್ ನೇತೃತ್ವದ ತಂಡ, ಅವರನ್ನು ಬೆನ್ನಟ್ಟಿ ಕಾರು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಪೊನ್ನಾನಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
​ತಿರೂರ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಗಳಾದ ಮಿಥುನ್, ಅನುಷಾ, ನಸೀರ್ ತಿರೂರ್ಕಾಡ್, ಎಎಸ್‌ಐ ಹೈಮಾವತಿ, ಅಬ್ದುಲ್ ರೆಹಮಾನ್, ಎಸ್‌ಸಿಪಿಒ ಶೆಮಿತ್ ಲಾಲ್, ಸಿಪಿಒಗಳಾದ ಅನಿಲ್ ಮತ್ತು ಪ್ರದೀಪ್ ಈ ತನಿಖಾ ತಂಡದಲ್ಲಿದ್ದರು.

ಸುದ್ದಿ ಸಂತೆ ನ್ಯೂಸ್ ಕೇರಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಸರಕಾರಿ ನೌಕರರಿಗೆ ತಲೆನೋವು ತಂದಿಟ್ಟ ನಿತ್ಯ ನಗದು ಘೋಷಣೆ.....ಶಿಕ್ಷಕಿಯರ ಸಮಸ್ಯೆಗಳಿಗೆ ಕಾನೂನು ಸೇವೆ ಪ್ರಾರಂಭ.....ವಿಭಾಗಕ್ಕೆ ಒಬ್ಬರು ಕಾನೂನು ಸಲಹೆಗಾರರು ನೇಮಕ.....ಮುಂಬೈನಲ್ಲಿ ಆರಂಭಗೊಂಡ ಬಸವೇಶ್ವರ ಖಾನಾವಳಿ ಮುಂಬೈನ ವಾಸಿಯಲ್ಲಿ ಉತ್ತರ ಕರ್ನಾಟಕ ದ ಫೇಮಸ್ ಬಸವೇಶ್ವರ ಖಾನಾವಳಿ ಸವಿರುಚಿ.....ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ಮಗನ ಸ್ಕೂಲ್ ಬ್ಯಾಗ್ ನಲ್ಲಿ ಕಂತೆ ಕಂತೆ ಹಣ ಅಧಿಕಾರಿ..... ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.....ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ.....ಹುಬ್ಬಳ್ಳಿಯಲ್ಲಿ NWKRTC ಚಾಲಕ ಕಂ ನಿರ್ವಾಹಕ ಮನೆಯ ಮೇಲೆ ಲೋಕಾಯುಕ್ತ ದಾಳಿ.....ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಆರಂಭವಾಗಲಿವೆ ಹೊಸ ಕ್ಲಾಸ್ ಗಳು.....ಆರ್ಥಿಕ ಇಲಾಖೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುರ್ತು ಸಂದೇಶ.....